ಕಾಸರಗೋಡು: ಎರೋಲ್ ನೆಲ್ಲಿಯಡ್ಕದ ಪೂಡಂಕಲ್ಲು ಎಂಬಲ್ಲಿ ನೂತನವಾಗಿ ನಿರ್ಮಿಸಲಾದ ಶ್ರೀಹರಿಸೇವಾ ಸಮಿತಿ ಕಚೇರಿ ಉದ್ಘಾಟನೆ 24 ರಂದು ಮಧ್ಯಾಹ್ನ 3 ಗಂಟೆಗೆ ಹಿಂದೂಐಕ್ಯವೇದಿ ರಾಜ್ಯಾಧ್ಯಕ್ಷೆ ಕೆ.ಪಿ.ಶಶಿಕಲಾ ಟೀಚರ್ ನೆರವೇರಿಸುವರು. ಸ್ವಾಗತ ಸಮಿತಿ ಅಧ್ಯಕ್ಷ ಕೃಷ್ಣನ್ ನಾಯರ್ ಮುನಿಕಲ್ ಅಧ್ಯಕ್ಷತೆ ವಹಿಸುವರು.
ಆರೆಸ್ಸೆಸ್ ಕಾಞಂಗಾಡ್ ಜಿಲ್ಲಾ ಸಂಘಚಾಲಕ್ ಕೆ.ದಾಮೋದರನ್ ಇಂಜಿನಿಯರ್, ಬಿಜೆಪಿಜಿಲ್ಲಾಧ್ಯಕ್ಷ ರವೀಶ ತಂತ್ರಿ ಕುಂಟಾರು, ಬಿಎಂಎಸ್ ಜಿಲ್ಲಾಧ್ಯಕ್ಷ ಕೆ.ಉಪೇಂದ್ರನ್ ಕೋಟಕುನ್ನು, ಸೇವಾಭಾರತಿ ಜಿಲ್ಲಾಧ್ಯಕ್ಷ ಕೆ.ಸಿ.ವೇಣುಗೋಪಾಲ್, ಹಿಂದೂಐಕ್ಯವೇದಿ ಜಿಲ್ಲಾ ಕಾರ್ಯಾಧ್ಯಕ್ಷ ಗೋಪಾಲಕೃಷ್ಣನ್ ಅಂಬಂಗಾಡ್, ಬಾಲಗೋಕುಲಂ ಜಿಲ್ಲಾಧ್ಯಕ್ಷ ಡಾ.ಸಿ.ಬಾಬು, ಸ್ವಾಗತ ಸಂಗಮದ ಮುಖ್ಯ ಪೆÇೀಷಕ ವಾಸುದೇವ ಬಟ್ಟತ್ತೂರು, ಹಿಂದೂಐಕ್ಯವೇದಿ ಮಾಜಿ ಅಧ್ಯಕ್ಷ ಎ. ಕರುಣಾಕರನ್ ಮಾಸ್ಟರ್ ಭಾಗವಹಿಸುರು. ಈ ಸಂದರ್ಭದಲ್ಲಿ ತುರ್ತು ಪರಿಸ್ಥಿತಿ ಹೋರಾಟದಲ್ಲಿ ಭಾಗವಹಿಸಿದವರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮೆರೆದವರನ್ನು ಸನ್ಮಾನಿಸಲಾಗುವುದು. ಈ ಸಂದರ್ಭ ವಿವಿಧ ಕಲಾ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮದ ಪೂರ್ವಭಾವಿಯಾಗ್ನಿಂದು ಮಧ್ಯಾಹ್ನ 2.30ಕ್ಕೆ ಚಂದ್ರಾಪುರದಿಂದ ಪೂಡಂಕಲ್ಲು ವರೆಗೆ ಮೆರವಣಿಗೆ ನಡೆಯಲಿದೆ. 22ರಂದು ಬೆಳಗ್ಗೆ 7ಕ್ಕೆ ಕ್ಷೀರಾಭಿಷೇಕ ಹಾಗೂ ಗಣಪತಿ ಹೋಮ ನಡೆಯುವುದು.




