ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಯ ಅಂಗವಾಗಿ ಕೇರಳ ಜಲ ಪ್ರಾಧಿಕಾರವು ನೀರು ವಿತರಣಾ ಪೈಪ್‍ಗಳ ದುರಸ್ತಿ ಕಾರ್ಯ ನಡೆಸುತ್ತಿರುವುದರಿಂದ ಡಿಸೆಂಬರ್ 19 ರಂದು ಕಾಸರಗೋಡು ನಗರಸಭೆ, ಚೆಂಗಳ, ಮಧೂರು ಮತ್ತು ಮೊಗ್ರಾಲ್ ಪುತ್ತೂರು ಗ್ರಮ ಪಂಚಾಯಿತಿ ವ್ಯಾಫ್ತಿಯಲ್ಲಿ ಜಲಪ್ರಧಿಕಾರ ವಿತರಿಸುವ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿರುವುದಾಗಿ ಜಲಪ್ರಧಿಕಾರ ಸಹಾಯಕ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




