ಕೊಚ್ಚಿ: ಶಬರಿಮಲೆ ಯಾತ್ರೆಯ ಸಂದರ್ಭ ಆಗುವ ಅನಾನುಕೂಲಗಳ ಕುರಿತು ಹೈಕೋರ್ಟ್ ಮಧ್ಯಪ್ರವೇಶ ಕೋರಿ ಮುನ್ನೂರು ದೂರುಗಳು ಬಂದಿವೆ ಎಂದು ದೇವಸ್ವಂ ಪೀಠ ಹೇಳಿದೆ.
ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗೆ ನ್ಯಾಯಾಲಯದ ಆದೇಶದಂತೆ ಸೌಲಭ್ಯಗಳನ್ನು ಒದಗಿಸುವಂತೆ ದೇವಸ್ವಂ ಪೀಠ ಸರ್ಕಾರಕ್ಕೆ ಸೂಚಿಸಿದೆ.
ಶಬರಿಮಲೆಯಲ್ಲಿ ಸಮಸ್ಯೆಗಳಿವೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ ಎಂದು ಸರ್ಕಾರ ಹೈಕೋರ್ಟ್‍ನಲ್ಲಿ ಹೇಳಿಕೆ ನೀಡಿದೆ. ಹೈಕೋರ್ಟ್‍ನ ಸೂಚನೆಯಂತೆ ಸಾಕಷ್ಟು ಸಂಖ್ಯೆಯ ಬಸ್‍ಗಳು ಮತ್ತು ಮೊಬೈಲ್ ಗಸ್ತು ಸೇವೆಗಳನ್ನು ಪರಿಚಯಿಸಲಾಗಿದೆ ಎಂದು ಸರ್ಕಾರವು ನ್ಯಾಯಾಲಯಕ್ಕೆ ತಿಳಿಸಿದೆ.
ಇದೇ ವೇಳೆ ಯಾತ್ರಾರ್ಥಿಗಳಿಂದ ಆಹಾರ ಮತ್ತು ವಾಹನ ನಿಲುಗಡೆಗೆ ಅಧಿಕ ಶುಲ್ಕ ವಸೂಲಿ ಮಾಡುತ್ತಿರುವ ದೂರಿನ ಬಗ್ಗೆ ಎರುಮೇಲಿ ಪಂಚಾಯಿತಿ ವಿವರಣೆ ನೀಡಬೇಕು ಎಂದು ಹೈಕೋರ್ಟ್ ಸೂಚಿಸಿದೆ. ಈ ಬಗ್ಗೆ ವಿವರಣೆ ನೀಡಲು ಎರುಮೇಲಿ ಪಂಚಾಯತ್ ಕಾರ್ಯದರ್ಶಿಯನ್ನು ಹೈಕೋರ್ಟ್ ಸ್ವಯಂಪ್ರೇರಣೆಯಿಂದ ಕಕ್ಷಿ ಮಾಡಿದೆ.


