ನವದೆಹಲಿ: ನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೀತನಿವಾರಕ ನಿಗದಿತ ಪ್ರಮಾಣದ ಔಷಧದ ಮಿಶ್ರಣ (ಎಫ್‌ಡಿಸಿ) ನೀಡಬಾರದು ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ನಿರ್ದೇಶಿಸಿದೆ.
0
samarasasudhi
ಡಿಸೆಂಬರ್ 21, 2023
ನವದೆಹಲಿ: ನಾಲ್ಕು ವರ್ಷಕ್ಕಿಂತ ಕೆಳಗಿನ ಮಕ್ಕಳಲ್ಲಿ ಶೀತನಿವಾರಕ ನಿಗದಿತ ಪ್ರಮಾಣದ ಔಷಧದ ಮಿಶ್ರಣ (ಎಫ್‌ಡಿಸಿ) ನೀಡಬಾರದು ಎಂದು ಕೇಂದ್ರ ಔಷಧ ಗುಣಮಟ್ಟ ನಿಯಂತ್ರಣ ಸಂಸ್ಥೆ (ಸಿಡಿಎಸ್‌ಸಿಒ) ನಿರ್ದೇಶಿಸಿದೆ.
ಈ ಕುರಿತು ಔಷಧ ಉತ್ಪಾದನಾ ಸಂಸ್ಥೆಗಳಿಗೆ ಸೂಚನೆ ನೀಡುವಂತೆ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಕಚೇರಿ ನಿರ್ದೇಶಿಸಿದೆ.
ಅಲ್ಲದೆ ಔಷಧಿಯಲ್ಲಿ ಕಡ್ಡಾಯವಾಗಿ 'ಎಚ್ಚರಿಕೆ'ಯ ಲೇಬಲ್ ಲಗತ್ತಿಸುವಂತೆ ಸೂಚಿಸಿದೆ.
ಭಾರತದ ಕಂಪನಿ ನಿರ್ಮಿತ ಕೆಮ್ಮಿನ ಸಿರಪ್ ಸೇವಿಸಿ ಜಾಗತಿಕವಾಗಿ 141ರಷ್ಟು ಮಕ್ಕಳು ಸಾವಿಗೀಡಾಗಿದ್ದ ಹಿನ್ನೆಲೆಯಲ್ಲಿ ಔಷಧ ನಿಯಂತ್ರಕ ಕಚೇರಿ ಕಠಿಣ ಕ್ರಮ ಕೈಗೊಂಡಿದೆ.
ಈ ಪೈಕಿ ಗಾಂಬಿಯಾ, ಉಜ್ಬೇಕಿಸ್ತಾನ ಹಾಗೂ ಕ್ಯಾಮರೂನ್ ದೇಶಗಳಲ್ಲಿ ಅತಿ ಹೆಚ್ಚು ಸಾವಿನ ಪ್ರಕರಣಗಳು ವರದಿಯಾಗಿತ್ತು. ಭಾರತದಲ್ಲೂ 12 ಮಕ್ಕಳು ಮೃತಪಟ್ಟಿದ್ದರು. ಇದರಿಂದಾಗಿ ಭಾರತದಿಂದ ರಫ್ತು ಆಗುತ್ತಿರುವ ಔಷಧಿ ಗುಣಮಟ್ಟದ ಮೇಲೆ ಶಂಕೆ ಉಂಟಾಗಿತ್ತು.