HEALTH TIPS

ಆಹಾರ ಸುರಕ್ಷತಾ ಇಲಾಖೆಯ ಹಾಸ್ಟೆಲ್‍ಗಳು, ಕ್ಯಾಂಟೀನ್‍ಗಳು ಮತ್ತು ಮೆಸ್‍ಗಳ ತಪಾಸಣೆ: 9 ಸಂಸ್ಥೆಗಳ ಕಾರ್ಯಾಚರಣೆ ಸ್ಥಗಿತ

                ತಿರುವನಂತಪುರ: ಶಿಕ್ಷಣ ಸಂಸ್ಥೆಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್‍ಗಳು, ಕ್ಯಾಂಟೀನ್‍ಗಳು ಮತ್ತು ಮೆಸ್‍ಗಳ ರಾಜ್ಯಾದ್ಯಂತ ತಪಾಸಣೆಯಲ್ಲಿ ಆಹಾರ ಸುರಕ್ಷತಾ ಇಲಾಖೆ ಅನೇಕ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಸಚಿವೆ ವೀಣಾ ಜಾರ್ಜ್ ಹೇಳಿರುವÀರು.

           ವಿವಿಧೆಡೆ ಕೋಚಿಂಗ್ ಸೆಂಟರ್ ಗಳಿಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸುತ್ತಿರುವ ಹಾಸ್ಟೆಲ್ ಗಳು ಹಾಗೂ ಮೆಸ್ ಗಳನ್ನೂ ಪರಿಶೀಲಿಸಲಾಗಿದ್ದು, ಇದೇ ತಿಂಗಳ 12 ಮತ್ತು 13ರಂದು ತಪಾಸಣೆ ನಡೆಸಲಾಗಿದೆ. ತಲಾ ಮೂವರು ಸದಸ್ಯರನ್ನು ಒಳಗೊಂಡ 96 ಸ್ಕ್ವಾಡ್‍ಗಳು 995 ಹಾಸ್ಟೆಲ್‍ಗಳು, ಕ್ಯಾಂಟೀನ್‍ಗಳು ಮತ್ತು ಮೆಸ್‍ಗಳನ್ನು ಪರಿಶೀಲಿಸಲಾಗಿದೆ. 

           ಅತ್ಯಂತ ಅನೈರ್ಮಲ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಒಂಬತ್ತು ಸಂಸ್ಥೆಗಳನ್ನು ನಿಲ್ಲಿಸಲಾಗಿದೆ. ಆಹಾರ ಸುರಕ್ಷತಾ ಗುಣಮಟ್ಟ ಕಾಯಿದೆಯಡಿ 127 ಸಂಸ್ಥೆಗಳಿಗೆ ಕಾಂಪೌಂಡಿಂಗ್ ನೋಟಿಸ್ ನೀಡಲಾಗಿದ್ದು, ಆಹಾರ ಸುರಕ್ಷತಾ ಮಾನದಂಡಗಳಲ್ಲಿ ವಿಫಲವಾಗಿರುವ 267 ಸಂಸ್ಥೆಗಳಿಗೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ನೋಟಿಸ್ ನೀಡಲಾಗಿದೆ. ಪಿಟಿಎಚ್ ಸಂಸ್ಥೆಗಳಿಗೂ ಸುಧಾರಣಾ ಸೂಚನೆಗಳನ್ನು ನೀಡಲಾಗಿದೆ.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries