ಕಾಸರಗೋಡು : ಹಿರಿಯ ವಿಡಿಯೋಗ್ರಾಫರ್, ಎ ನಂದಕುಮಾರ್ ಅವರಿಗೆ ಕಾಸರಗೋಡು ಪ್ರೆಸ್ ಕ್ಲಬ್ ವತಿಯಿಂದ ಕೊಡಮಾಡುವ ಕೆ.ಎಂ.ಅಹ್ಮದ್ ಸ್ಮಾರಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಬಾರಿ ಅತ್ಯುತ್ತಮ ವಿಡಿಯೋ ಪತ್ರಕರ್ತರನ್ನು ಪ್ರಶಸ್ತಿಗೆ ಪರಿಗಣಿಸಲಾಗಿದ್ದು, ಮನೋರಮಾ ನ್ಯೂಸ್ ನಲ್ಲಿ ಪ್ರಸಾರವಾದ ರಾಜ್ಯ ಶಾಲಾ ಕ್ರೀಡಾ ಮೇಳಕ್ಕೆ ಸಂಬಂಧಿಸಿದ ಸುದ್ದಿ ಪ್ರಶಸ್ತಿಗಾಗಿ ಅರ್ಹತೆ ಪಡೆದುಕೊಮಡಿದೆ. ಪ್ರಶಸ್ತಿ ಹತ್ತು ಸಾವಿರ ರೂ. ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಹಿರಿಯ ಮಾಧ್ಯಮ ಪ್ರತಿನಿಧಿ ಎಂ.ಪಿ. ಬಶೀರ್ ಮತ್ತು ಸನ್ನಿ ಜೋಸೆಫ್ ಅವರನ್ನೊಳಗೊಂಡ ತೀರ್ಪುಗಾರರ ತಂಡ ಪ್ರಶಸ್ತಿ ವಿಜೇತರನ್ನು ಆಯ್ಕೆ ಮಾಡಿದೆ. ಡಿ. 16ರಂದು ಬೆಳಗ್ಗೆ 11ಕ್ಕೆ ಕಾಸರಗೋಡು ಪ್ರೆಸ್ ಕ್ಲಬ್ ಸಭಾಂಗಣದಲ್ಲಿ ನಡೆಯುವ ಕೆ.ಎಂ.ಅಹ್ಮದ್ ಸಂಸ್ಮರಣಾ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಕಥೆಗಾರ ಟಿ. ಪದ್ಮನಾಭನ್ ಪ್ರಶಸ್ತಿ ಪ್ರದಾನ ಮಾಡುವರು.
ನಂದಕುಮಾರ್ ಕಳೆದ 18 ವರ್ಷಗಳಿಂದ ಮನೋರಮಾ ನ್ಯೂಸ್‍ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೇರಳ ಜರ್ನಲಿಸ್ಟ್ ಯೂನಿಯನ್ ರಾಜ್ಯ ಸಮ್ಮೇಳನದ ಅಂಗವಾಗಿ ಕೇರಳ ರಾಜ್ಯ ಮಾಧ್ಯಮ ತೀರ್ಪುಗಾರರ ಪ್ರಶಸ್ತಿ, ಗಿರೀಶ್ ಓಮಲ್ಲೂರ್ ಪ್ರಶಸ್ತಿ, ರೆಡ್ ರಿಬ್ಬನ್ ಪ್ರಶಸ್ತಿ ಮತ್ತು ಪ್ರದರ್ಶನ ಪ್ರಶಸ್ತಿ ಪಡೆದುಕೊಮಡಿದ್ದಾರೆ. ಪಾಲಕ್ಕಾಡ್ ಕಲ್ಪೆಟ್ಟ ನಿವಾಸಿಯಾಗಿದ್ದಾರೆ.





