HEALTH TIPS

ಕೆನಡಾ: ಅಂತರಾಷ್ಟ್ರೀಯ ವಿದ್ಯಾರ್ಥಿಗಳಿಗೆ ಜೀವನ ವೆಚ್ಚದ ಅವಶ್ಯಕತೆ ಹೆಚ್ಚಳ

                ಟೊರಂಟೊ: ದೇಶದಲ್ಲಿ ಜೀವನ ವೆಚ್ಚದ ಬಿಕ್ಕಟ್ಟಿನ ಮಧ್ಯೆ, ಅಂತರಾಷ್ಟ್ರೀಯ ವಿದ್ಯಾರ್ಥಿಗಳು ತರಬೇಕಿರುವ ಜೀವನವೆಚ್ಚ ಬೆಂಬಲ ನಿಧಿಯ ಮೊತ್ತವನ್ನು ಕೆನಡಾ ದುಪ್ಪಟ್ಟಿಗಿಂತಲೂ ಅಧಿಕ ಪ್ರಮಾಣದಲ್ಲಿ ಹೆಚ್ಚಿಸಿದೆ ಎಂದು ವರದಿಯಾಗಿದೆ.

              ಮುಂದಿನ ವರ್ಷದ ಜನವರಿ 1 ಅಥವಾ ಆ ಬಳಿಕ ಸ್ವೀಕರಿಸುವ ಹೊಸ ಅಧ್ಯಯನ ಪರವಾನಿಗೆ ಅರ್ಜಿಗೆ ಸಂಬಂಧಿಸಿ, ಅರ್ಜಿದಾರರು ತಮ್ಮ ಬಳಿ 20,635 ಕೆನಡಿಯನ್ ಡಾಲರ್(ಸುಮಾರು 12.7 ಲಕ್ಷ ರೂ.) ಹಣ ಇರುವುದನ್ನು ತೋರಿಸಬೇಕಾಗುತ್ತದೆ ಎಂದು ಕೆನಡಾದ `ವಲಸೆ, ನಿರಾಶ್ರಿತರು ಮತ್ತು ಪೌರತ್ವ' ಇಲಾಖೆ ಸೂಚಿಸಿದೆ.

               ಈ ಹಿಂದೆ ಈ ಮೊತ್ತ 10,000 ಕೆನಡಿಯನ್ ಡಾಲರ್(6.14 ಲಕ್ಷ ರೂ.) ಆಗಿತ್ತು.

ಅಧ್ಯಯನ ಪರವಾನಿಗೆ ಅರ್ಜಿಗಳಿಗೆ ಜೀವನವೆಚ್ಚ ಅವಶ್ಯಕತೆ ನಿಧಿಯಲ್ಲಿ 2000ನೇ ಇಸವಿಯ ಬಳಿಕ ಬದಲಾವಣೆಯಾಗಿಲ್ಲ. ಅಂತೆಯೇ, ಜೀವನವೆಚ್ಚದ ಅವಶ್ಯಕತೆಯ ಪ್ರಮಾಣ ಪ್ರತೀ ವರ್ಷ ಹೆಚ್ಚಾಗುತ್ತದೆ. ಆದ್ದರಿಂದ ಕೆನಡಾಕ್ಕೆ ಆಗಮಿಸುವ ವಿದ್ಯಾರ್ಥಿಗಳ ಬಳಿ ಇರುವ ಹಣದ ಮೊತ್ತ ಸಾಕಾಗುವುದಿಲ್ಲ. ನಾವು ಜೀವನ ವೆಚ್ಚ ಮಿತಿಯನ್ನು ಪರಿಷ್ಕರಿಸುತ್ತಿದ್ದು ಕೆನಡಾಕ್ಕೆ ಆಗಮಿಸುವ ವಿದ್ಯಾರ್ಥಿಗಳು ಇಲ್ಲಿಯ ಜೀವನ ವೆಚ್ಚದ ಬಗ್ಗೆ ತಿಳಿದುಕೊಳ್ಳಲು ಇದರಿಂದ ಸಾಧ್ಯವಾಗಲಿದೆ. ಈ ಕ್ರಮವು ಕೆನಡಾದಲ್ಲಿ ಅವರ ಯಶಸ್ಸಿಗೆ ಪ್ರಮುಖವಾಗಿದೆ ಎಂದು ವಲಸೆ, ನಿರಾಶ್ರಿತರು ಮತ್ತು ಪೌರತ್ವ ಇಲಾಖೆ ಸಚಿವ ಮಾರ್ಕ್ ಮಿಲ್ಲರ್ ಹೇಳಿದ್ದಾರೆ.

                      ವಿದ್ಯಾರ್ಥಿಗಳು ನಮ್ಮ ದೇಶಕ್ಕೆ ಬಂದಾಗ ಅವರಿಗೆ ಬೆಂಬಲವಿದೆ ಎಂದು ಖಚಿತಪಡಿಸುವ ಜವಾಬ್ದಾರಿಯನ್ನು ಕೆನಡಾ ಸರಕಾರ ಹೊಂದಿದೆ. ಕಲಿಕಾ ಸಂಸ್ಥೆಗಳು ಅಂತರಾಷ್ಟ್ರೀಯ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವ ಸಂದರ್ಭ ವಸತಿ ಆಯ್ಕೆ ಸೇರಿದಂತೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಹೊಂದಿದೆ. ಆದ್ದರಿಂದ ತಮ್ಮ ಸಾಮರ್ಥ್ಯದಷ್ಟೇ ಪ್ರಮಾಣದಲ್ಲಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಬೇಕು ಎಂದು ಸಚಿವರು ಹೇಳಿದ್ದಾರೆ.


Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries