ಎರ್ನಾಕುಳಂ: ಕರುವನ್ನೂರ್ ಸಹಕಾರಿ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಿಪಿಎಂ ತ್ರಿಶೂರ್ ಜಿಲ್ಲಾ ಕಾರ್ಯದರ್ಶಿ ಎಂಎಂ ವರ್ಗೀಸ್ ಇಂದು ಮತ್ತೆ ಇಡಿ ಮುಂದೆ ಹಾಜರಾಗಿದ್ದಾರೆ.
ಸಿಪಿಎಂ ಬ್ಯಾಂಕ್‍ನಲ್ಲಿ ಎರಡು ಖಾತೆಗಳನ್ನು ಹೊಂದಿರುವುದನ್ನು ಪತ್ತೆ ಹಚ್ಚಿದ ನಂತರ ವಿಚಾರಣೆಗೆ ಮತ್ತೊಮ್ಮೆ ಹಾಜರಾಗುವಂತೆ ಇಡಿ ವರ್ಗೀಸ್‍ಗೆ ನೋಟಿಸ್ ಜಾರಿ ಮಾಡಿತ್ತು.
ಇ.ಡಿ. ಅಧಿಕಾರಿಗಳು ನಿನ್ನೆ ವರ್ಗೀಸ್ ಅವರನ್ನು ಏಳು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಬ್ಯಾಂಕ್ ವಂಚನೆಗೆ ಸಂಬಂಧಿಸಿದಂತೆ ಇಡಿ ನಾಲ್ಕನೇ ಬಾರಿಗೆ ವರ್ಗೀಸ್ ಅವರನ್ನು ವಿಚಾರಣೆಗೆ ಒಳಪಡಿಸಿದೆ. ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಸಾಕ್ಷಿಯಾಗಿ ಇಡಿ ಅವರನ್ನು ಇದುವರೆಗೆ ವಿಚಾರಣೆ ನಡೆಸಿತ್ತು. ಆದರೆ ಅವರು ತನಿಖೆಗೆ ಸಹಕರಿಸದ ಕಾರಣ ಮರು ವಿಚಾರಣೆಗೆ ನೋಟಿಸ್ ನೀಡಲಾಗಿದೆ ಎಂದು ಇಡಿ ತಿಳಿಸಿದೆ.


