ಕೊಲ್ಲಂ: ನವಜಾತ ಶಿಶುವನ್ನು ಕೊಂದು ಹೂತಿಟ್ಟ ಪ್ರಕರಣದಲ್ಲಿ ತಾಯಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿದೆ.
ಪುತ್ತೂರು ಮೂಲದ ಅಂಬಿಲಿಗೆ ಕೊಲ್ಲಂ ಪ್ರಥಮ ದರ್ಜೆ ಹೆಚ್ಚುವರಿ ಸೆಷನ್ಸ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ಆರೋಪಿ ಪತಿ ಮಹೇಶ್ ನನ್ನು ನ್ಯಾಯಾಲಯ ಖುಲಾಸೆಗೊಳಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದ ಘಟನೆಯು ಏಪ್ರಿಲ್ 2018 ರಲ್ಲಿ ನಡೆದಿತ್ತು. ಮಹೇಶ್ ಮತ್ತು ಅಂಬಿಲಿಗೆ ಎರಡೂವರೆ ವರ್ಷದ ಮಗುವಿತ್ತು. ಅಷ್ಟರಲ್ಲಿ ಅಂಬಿಲಿ ಮತ್ತೆ ಗರ್ಭಿಣಿಯಾದಳು. ಖಾಸಗಿ ಆಸ್ಪತ್ರೆಯಲ್ಲಿ ಗರ್ಭಪಾತಕ್ಕೆ ಯತ್ನಿಸಲಾಗಿತ್ತಾದರೂ ವಿಫಲವಾಗಿದೆ. ನಂತರ ಪತಿ ನೀಡಿದ ಗರ್ಭಪಾತದ ಮಾತ್ರೆ ಸೇವಿಸಿದರೂ ಪ್ರಯತ್ನ ಫಲಿಸಲಿಲ್ಲ. ಬಳಿಕ ಸಂಬಂಧಿಕರ ಮನೆಯಲ್ಲಿ ಹುಟ್ಟಿದ ಮಗುವನ್ನು ಎದೆಗೆ ಒತ್ತಿ ಉಸಿರುಗಟ್ಟಿಸಿ ಕೊಂದು ಹಿತ್ತಲಲ್ಲಿ ಹೂತು ಹಾಕಿದ್ದಳು.
ಬೀದಿ ನಾಯಿಗಳು ಗುಂಡಿ ತೋಡಿದಾಗ ಸ್ಥಳೀಯರಿಗೆ ಘಟನೆ ತಿಳಿಯಿತು. ಸ್ಥಳೀಯ ನಿವಾಸಿಗಳು ಮತ್ತು ಆಶಾ ಕಾರ್ಯಕರ್ತೆಯರ ಸಹಾಯದಿಂದ ನಡೆಸಿದ ತನಿಖೆಯಲ್ಲಿ ಇಬ್ಬರನ್ನೂ ಬಂಧಿಸಲಾಗಿದೆ. ಮಹೇಶ್ ಮೇಲಿನ ಅಪರಾಧವೇನೆಂದರೆ, ತನ್ನ ಪತ್ನಿ ಗರ್ಭಿಣಿ ಎಂಬ ವಿಷಯವನ್ನು ಮುಚ್ಚಿಟ್ಟು ಹಲವು ಬಾರಿ ಗರ್ಭಪಾತಕ್ಕೆ ಯತ್ನಿಸಿದ್ದ.


