ಮುಳ್ಳೇರಿಯ: ಕಂದಾಯಜಿಲ್ಲಾ ಶಾಲಾಕಲೋತ್ಸವದ ವೇದಿಕೆ ಸ್ಪರ್ಧೆಗಳು ಗುರುವಾರ ಕಾರಡ್ಕ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆರಂಭಗೊಂಡಿತು.ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮತ್ತು ಎಚ್‍ಎಸ್‍ಎಸ್ ವಿಭಾಗದಲ್ಲಿ 4112 ಪ್ರತಿಭೆಗಳು ಸ್ಪರ್ಧಿಸಲಿದ್ದಾರೆ.
ಸ್ಪರ್ಧೆಯು ಒಟ್ಟು 83 ವೇದಿಕೇತರ ಮತ್ತು 222 ವೇದಿಕೆ ಸ್ಪರ್ಧೆಗಳು ಒಳಗೊಂಡಿದೆ. ಉಪಜಿಲ್ಲೆಯಿಂದ 92 ಅಪೀಲು ಲಭಿಸಿದ್ದು, ಅನುಮೋದನೆ ಪಡೆದ ಎಲ್ಲ 301 ಮಕ್ಕಳು ಸ್ಪರ್ಧಿಸುತ್ತಿದ್ದಾರೆ. ಏಕಪಾತ್ರಾಭಿನಯ, ಮಾಪಿಳ್ಳಪಾಟ್, ಒಪ್ಪನ, ಪೂರಕ್ಕಳಿ, ಸಂಸ್ಕ್ರತ ನಾಟಕ, ಪಂಚಮುಟ್ಟ್, ವಯಲಿನ್‍ವಾದನ, ಖುರಾನ್ ಪಾರಾಯಣ, ಅರಬಿಕ್ ಹಾಡು, ಉರ್ದು ಹಾಡು, ಲಲಿತ ಗಾನ, ಇಂಗ್ಲಿಷ್ ಪದ್ಯ ಸೆರಿದಂತೆ ನಾನಾ ಸ್ಪರ್ಧೆಗಳು ನಡೆಯುತ್ತಿದೆ.





