HEALTH TIPS

ಶಸ್ತ್ರ ಪಡೆಗಳ ಧ್ವಜ ದಿನಾಚರಣೆ-ಜಿಲ್ಲಾ ಮಟ್ಟದ ಉದ್ಘಾಟನೆ, ಸ್ಮಾರಕಕ್ಕೆ ಪುಷ್ಪಾರ್ಚನೆ

 

            ಕಾಸರಗೋಡು: ಸೈನಿಕ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆಯ ಜಿಲ್ಲಾ ಮಟ್ಟದ ಉದ್ಘಾಟನೆಯನ್ನು ಶಾಸಕ ಎನ್.ಎ.ನೆಲ್ಲಿಕುನ್ನ್ ಅವರು ನೆರವೇರಿಸಿದರು.  ಕಾಸರಗೋಡು ಜಿಲ್ಲಾಧಿಕಾರಿ ಕಚೇರಿ ವಠಾರದಲ್ಲಿ ವೀರ ಯೋಧರ ಸ್ಮರಣಾರ್ಥ ಸ್ಥಾಪಿಸಿದ ಯುದ್ಧ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು. ಈ ಸಂದರ್ಭ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು,  ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಸೈನಿಕರೇ ನಿಜವಾದ ದೇಶಭಕ್ತರು. ಹಗಲಿರುಲು ಕಾಯುತ್ತಿರುವ ನಮ್ಮ ಸೈನಿಕರಿಂದಾಗಿ ನಾವಿಂದು ಸುಖಜೀವನ ಅನುಭವಿಸುತ್ತಿದ್ದೇವೆ. ಸೇನೆಯಿಂದ ನಿವೃತ್ತಿ ಹೊಂದಿದ ನಂತರ ವಿಶ್ರಾಂತ ಜೀವನ ನಡೆಸುವ ಧೀರ ಸೈನಿಕರು ಹೆಚ್ಚಿನ ಗೌರವ ಮತ್ತು ಕಾಳಜಿಗೆ ಅರ್ಹರಾಗಿದ್ದು ಅವರನ್ನು ಸಮಾಜ ಜೊತೆಗೂಡಿಸಬೇಕೆಂದು ತಿಳಿಸಿದರು. ಎ.ಡಿ.ಎಂ ಕೆ.ನವೀನ್ ಬಾಬು ಅಧ್ಯಕ್ಷತೆ ವಹಿಸಿದ್ದರು.   ಜಿಲ್ಲಾ ಸೇನಾ ಮಂಡಳಿ ಸದಸ್ಯ ನಿವೃತ್ತ ಸ್ಕ್ವಾಡ್ ಲೀಡರ್ ಕೆ.ನಾರಾಯಣನ್ ನಾಯರ್ ಸಶಸ್ತ್ರ ಪಡೆಗಳ ಧ್ವಜ ದಿನಾಚರಣೆ ಸಂದೇಶ ನೀಡಿದರು. ಜಿಲ್ಲಾ ಸೈನಿಕ ಮಂಡಳಿ ಸದಸ್ಯ ನಿವೃತ್ತ ಹಾನರರಿ ಕ್ಯಾಪ್ಟನ್ ಮೋಹನನ್ ನಾಯರ್, ಜಿಲ್ಲಾ ವಾರ್ತಾಧಿಕಾರಿ ಎಂ.ಮಧುಸೂಧನ್, ಕೆ.ಪಿ. ರಾಜನ್,  ಎನ್.ಸಿ.ಸಿ ಕೆಡೆಟ್‍ಗಳು ಪಾಲ್ಗೊಂಡಿದ್ದರು.  ಜಿಲ್ಲಾ ಪ್ರಭಾರ ಸೈನಿಕ ಕಲ್ಯಾಣಾಧಿಕಾರಿ ಕೆ.ಕೆ.ಶಾಜಿ ಸ್ವಾಗತಿಸಿದರು.  ಎಂ.ಪವಿತ್ರನ್ ವಂದಿಸಿದರು.  ಜಿಲ್ಲಾ ಸೈನಿಕ ಕಲ್ಯಾಣ ಕಚೇರಿಯ ಎ.ವಿ.ಬಾಬು, ಪಿ.ಕೆ.ರೂಪೇಶ್ ಕುಮಾರ್ ಎಂಬಿವರು ನೇತೃತ್ವ ವಹಿಸಿದ್ದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries