ಕೊಚ್ಚಿ: ಅಯೋಧ್ಯೆ ರಾಮಜನ್ಮಭೂಮಿ ಸನ್ನಿಧಿಯಲ್ಲಿ ಜನವರಿ 22ರಂದು ಪ್ರಾಣಪ್ರತಿಷ್ಠೆ ನಡೆಯಲಿದ್ದು, ಕೇರಳದ 50 ಲಕ್ಷ ಮನೆಗಳಲ್ಲಿ ಭದ್ರ ದೀಪ ಬೆಳಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ದೇವಸ್ಥಾನ ಟ್ರಸ್ಟ್‍ನ ರಾಜ್ಯ ಪದಾಧಿಕಾರಿಗಳಾದ ವಿ.ಜಿ.ತಂಬಿ ಮತ್ತು ವಿ.ಆರ್. ರಾಜಶೇಖರನ್ ಮತ್ತು ಗಿಜೇಶ್ ಪ್ಯಾಟರಿ ತಿಳಿಸಿದರು.
ವನವಾಸ ಮತ್ತು ರಾವಣ ನಿಗ್ರಹದ ನಂತರ ಅಯೋಧ್ಯೆಗೆ ಹಿಂತಿರುಗಿದ ಭಗವಾನ್ ಶ್ರೀರಾಮಚಂದ್ರನನ್ನು ಪ್ರಜೆಗಳು ದೀಪ ಬೆಳಗಿಸಿ ಸ್ವಾಗತಿಸಿದಂತೆಯೇ, ಎಲ್ಲಾ ಮನೆಗಳು ಇದಕ್ಕಾಗಿ ಸಿದ್ಧವಾಗುತ್ತವೆ. ಜನವರಿ 1ರಿಂದ 15ರವರೆಗೆ ಮನೆಮನೆಗೆ ತೆರಳಿ ಅಕ್ಷತೆ, ಕರಪತ್ರಗಳನ್ನು ವಿತರಿಸಲಾಗುವುದು. ಕೇರಳದ 25 ಸನ್ಯಾಸಿಗಳ ನೇತೃತ್ವದಲ್ಲಿ ವಿವಿಧ ಹಿಂದೂ ಸಮುದಾಯಗಳ ಪ್ರತಿನಿಧಿಗಳು ಸೇರಿದಂತೆ 100 ಜನರು ಪ್ರಾಣ ಪ್ರತಿಷ್ಠೆಯಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.
ಫೆಬ್ರವರಿಯಲ್ಲಿ ರಾಮ ಜನ್ಮಭೂಮಿಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕರಸೇವಕರು, ಕುಟುಂಬ ಸದಸ್ಯರು ಮತ್ತು ಇತರರು ಸೇರಿದಂತೆ 2000 ಜನರು ಭಾಗವಹಿಸುತ್ತಿದ್ದಾರೆ. ರಾಮ ಭಕ್ತರು ಪ್ರಾಣ ಪ್ರತಿμÉ್ಠಯ ಸಮಯದಲ್ಲಿ ಕೇರಳದ ಪ್ರಮುಖ ದೇವಾಲಯಗಳಲ್ಲಿ ಸೇರುತ್ತಾರೆ. ರಾಮ ಮಂತ್ರ ಜಪಂ ಮತ್ತು ಆರತಿಯೊಂದಿಗೆ ಅಯೋಧ್ಯೆಯಲ್ಲಿ ಲೈವ್ ಪ್ರಾಣ ಪ್ರತಿಷ್ಠೆ ವೀಕ್ಷಿಸಬಹುದು. ಸಂಜೆ ಎಲ್ಲಾ ಹಿಂದೂ ಮನೆಗಳು ದೀಪವನ್ನು ಬೆಳಗಿಸಿ ರಾಮನ ನಾಮವನ್ನು ಜಪಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿರುವರು.





