ಕೊಚ್ಚಿ: ಕೇರಳದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ವಾಕ್ಸಮರ ಮುಂದುವರಿದಿದೆ. 'ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ' ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
0
samarasasudhi
ಡಿಸೆಂಬರ್ 08, 2023
ಕೊಚ್ಚಿ: ಕೇರಳದಲ್ಲಿ ರಾಜ್ಯ ಸರ್ಕಾರ ಮತ್ತು ರಾಜ್ಯಪಾಲರ ನಡುವಿನ ವಾಕ್ಸಮರ ಮುಂದುವರಿದಿದೆ. 'ರಾಜ್ಯಪಾಲ ಅರೀಫ್ ಮೊಹಮ್ಮದ್ ಖಾನ್ ಅವರು ತಮ್ಮ ಕರ್ತವ್ಯವನ್ನು ನಿಭಾಯಿಸುತ್ತಿಲ್ಲ' ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
'ರಾಜ್ಯಪಾಲರು ಸಂಘ ಪರಿವಾರದ ಬೆಂಬಲಿಗರಾಗಿದ್ದರೆ ತಮಗೇನೂ ಸಮಸ್ಯೆ ಇಲ್ಲ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ್ದ ರಾಜ್ಯಪಾಲರು, 'ಸರ್ಕಾರದ ಸಲಹೆಗಳಿಗೆ ನಾನು ಮುಕ್ತವಾಗಿದ್ದೇನೆ. ಆದರೆ, ನನ್ನ ಮೇಲೆ ಒತ್ತಡವನ್ನು ಹೇರಲಾಗದು' ಎಂದು ಹೇಳಿದ್ದರು. ವಿವಿಧ ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ಕುರಿತು ಈ ಮಾತು ಆಡಿದ್ದರು.
ಮಸೂದೆ ಅಥವಾ ಸುಗ್ರೀವಾಜ್ಞೆ ಕುರಿತಂತೆ ತುರ್ತು ಕ್ರಮ ಅಗತ್ಯ ಎಂದು ಸರ್ಕಾರ ಭಾವಿಸಿದ್ದರೆ, ರಾಜಭವನಕ್ಕೆ ಬಂದು ತಿಳಿಸಬೇಕು ಎಂದು ರಾಜ್ಯಪಾಲರು ಹೇಳಿದ್ದರು. ವಿಶ್ವವಿದ್ಯಾಲಯಗಳಿಗೆ ಕುಲಪತಿಗಳ ನೇಮಕ ವಿಷಯ ಸರ್ಕಾರ -ರಾಜ್ಯಪಾಲರ ನಡುವೆ ಸಂಘರ್ಷ ನಡೆದಿದೆ.