HEALTH TIPS

'ಎಐ' ಸಂಶೋಧಕ ಅಲ್ಲ: ಬ್ರಿಟನ್‌ ಸುಪ್ರೀಂ ಕೋರ್ಟ್‌

            ಲಂಡನ್‌: ಯಾವುದೇ ಸಂಶೋಧನೆಗೆ ಸಂಬಂಧಿಸಿ ಪೇಟೆಂಟ್‌ (ಏಕಸ್ವಾಮ್ಯ) ಪಡೆಯಬೇಕಾದಲ್ಲಿ ಮಾನವ ಅಥವಾ ಸಂಸ್ಥೆಯೊಂದು ಸಂಶೋಧನೆ ಮಾಡಿರಬೇಕು. ಕೃತಕ ಬುದ್ಧಿಮತ್ತೆ (ಎಐ) ಅಥವಾ ಯಂತ್ರದ ನೆರವಿನಿಂದ ಮಾಡಿದ ಸಂಶೋಧನೆಗೆ ಪೇಟೆಂಟ್‌ ನೀಡಲು ಸಾಧ್ಯವಿಲ್ಲ ಎಂದು ಬ್ರಿಟನ್‌ ಸುಪ್ರೀಂ ಕೋರ್ಟ್‌ ಬುಧವಾರ ಮಹತ್ವದ ತೀರ್ಪು ನೀಡಿದೆ.

            'ಕೃತಕ ಬುದ್ಧಿಮತ್ತೆಯನ್ನು ಸಂಶೋಧಕ ಎಂಬುದಾಗಿ ಪರಿಗಣಿಸಲಾಗದು' ಎಂದು ನ್ಯಾಯಮೂರ್ತಿ ಡೇವಿಡ್ ಕಿಚಿನ್‌ ತಮ್ಮ ತೀರ್ಪಿನಲ್ಲಿ ಹೇಳಿದ್ದಾರೆ.

               ಅಮೆರಿಕದ ಕಂಪ್ಯೂಟರ್‌ ವಿಜ್ಞಾನಿ ಸ್ಟೀಫನ್‌ ಥೇಲರ್ ಎಂಬುವವರು ಕೃತಕ ಬುದ್ಧಿಮತ್ತೆಯಿಂದ ಕಾರ್ಯ ನಿರ್ವಹಿಸುವ 'ಡಿಎಬಿಯುಸ್' ಹೆಸರಿನ 'ಸೃಜನಶೀಲ ಯಂತ್ರ' ಬಳಸಿ ಮಾಡಿರುವ ಸಂಶೋಧನೆಗಳಿಗೆ ಪೇಟೆಂಟ್‌ ನೋಂದಣಿಗಾಗಿ ಬ್ರಿಟನ್‌ನ ಬೌದ್ಧಿಕ ಹಕ್ಕು ಕಚೇರಿಗೆ (ಐಪಿಒ) ಅರ್ಜಿ ಸಲ್ಲಿಸಿದ್ದರು.

               ಕೃತಕ ಬುದ್ಧಿಮತ್ತೆಯನ್ನು ಸಂಶೋಧಕ ಎಂಬುದಾಗಿ ಪರಿಗಣಿಸಲಾಗದು ಎಂಬ ಕಾರಣ ನೀಡಿ, ಸ್ವೀಫನ್‌ ಅವರ ಅರ್ಜಿಯನ್ನು ಐಪಿಒ ತಿರಸ್ಕರಿಸಿತ್ತು.

                 ಐಪಿಒ ಆದೇಶ ಪ್ರಶ್ನಿಸಿ ಸ್ವೀಫನ್‌ ಅವರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries