ನವದೆಹಲಿ: ಸಹಜೀವನವನ್ನು 'ಅಪಾಯಕಾರಿ ಕಾಯಿಲೆ' ಎಂದು ಕರೆದಿರುವ ಹರಿಯಾಣದ ಬಿಜೆಪಿ ಸಂಸದ ಧರಂವೀರ್ ಸಿಂಗ್, 'ಸಹಜೀವನ ಸಂಬಂಧವನ್ನು ಸಮಾಜದಿಂದ ತೊಲಗಿಸಬೇಕು' ಎಂದು ಕರೆಕೊಟ್ಟಿದ್ದಾರೆ.
0
samarasasudhi
ಡಿಸೆಂಬರ್ 08, 2023
ನವದೆಹಲಿ: ಸಹಜೀವನವನ್ನು 'ಅಪಾಯಕಾರಿ ಕಾಯಿಲೆ' ಎಂದು ಕರೆದಿರುವ ಹರಿಯಾಣದ ಬಿಜೆಪಿ ಸಂಸದ ಧರಂವೀರ್ ಸಿಂಗ್, 'ಸಹಜೀವನ ಸಂಬಂಧವನ್ನು ಸಮಾಜದಿಂದ ತೊಲಗಿಸಬೇಕು' ಎಂದು ಕರೆಕೊಟ್ಟಿದ್ದಾರೆ.
ಲೋಕಸಭೆಯಲ್ಲಿ ಗುರುವಾರ ಶೂನ್ಯ ವೇಳೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 'ಸಹಜೀವನ ಎಂಬ ಹೊಸ ಪಿಡುಗು ಸಮಾಜದಲ್ಲಿ ತಲೆಯೆತ್ತಿದೆ.
'ಸಹಜೀವನ ಸಂಬಂಧ ನಮ್ಮ ಸಮಾಜವನ್ನು ವಿನಾಶದತ್ತ ತಳ್ಳುವುದು ಮಾತ್ರವಲ್ಲದೆ, ದ್ವೇಷ ಹರಡುತ್ತಿದೆ. ಇದು ಮುಂದುವರಿಯಲು ಅವಕಾಶ ನೀಡಬಾರದು. ಸಹಜೀವನ ಸಂಬಂಧ ನಿಯಂತ್ರಿಸಲು ಕಾನೂನು ರೂಪಿಸುವಂತೆ ನಾನು ಸಚಿವರಲ್ಲಿ ಮನವಿ ಮಾಡುತ್ತೇನೆ' ಎಂದು ಭಿವಾನಿ ಮಹೇಂದ್ರಗಢ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಅವರು ಹೇಳಿದರು.
'ಪ್ರೀತಿಸಿ ಮದುವೆಯಾದವರಲ್ಲಿ ವಿಚ್ಛೇದನ ಪ್ರಮಾಣ ತುಂಬಾ ಹೆಚ್ಚಿದೆ. ಪ್ರೇಮ ವಿವಾಹದಿಂದಾಗಿ ಹಳ್ಳಿಗಳಲ್ಲಿ ಘರ್ಷಣೆ ಉಂಟಾಗುತ್ತಿದ್ದು, ಹಲವು ಕುಟುಂಬಗಳು ನಾಶವಾಗಿವೆ. ಆದ್ದರಿಂದ ಮದುವೆಗೆ ವಧು ಮತ್ತು ವರನ ಪೋಷಕರ ಒಪ್ಪಿಗೆಯನ್ನು ಕಡ್ಡಾಯ ಮಾಡಬೇಕು' ಎಂದು ಒತ್ತಾಯಿಸಿದರು.