ಪೆರ್ಲ: ತಿರುವನಂತಪುರದಲ್ಲಿ ನಡೆದ ರಾಜ್ಯ ಮಟ್ಟದ ವೃತ್ತಿ ಪರಿಚಯ ಮೇಳದ ಬೀಡ್ಸ್ ವರ್ಕ್ ಸ್ಪರ್ಧೆಯ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಎಡನೀರು ಶ್ರೀ ಸ್ವಾಮೀಜೀಸ್ ಹೈಯರ್ ಸೆಕೆಂಡರಿ ಶಾಲೆಯ ರಕ್ಷಿತಾ ರೈ ಹಾಗೂ ಹೈಸ್ಕೂಲ್ ವಿಭಾಗದಲ್ಲಿ ಪೆಲ್ ಶ್ರೀ ಸತ್ಯ ನಾರಾಯಣ ಪ್ರೌಢಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಮನ್ವಿತಾ ರೈ 'ಎ' ಗ್ರೇಡ್ ಪಡೆದಿರುತ್ತಾರೆ. ಇವರು ಬಜಕೂಡ್ಲು ಮಹಾಬಲ ರೈ ಹಾಗೂ ಪೆಲ್ ಸಲಾ ಶಿಕ್ಷಕಿ ಮಮತಾ ದಂಪತಿ ಪುತ್ರಿಯರು.





