ಕಾಸರಗೋಡು: 'ದಿ ಜರ್ನಿ ಆಫ್ ಸೊಸೈಟಿ' ಕನ್ನಡ ವಾರಪತ್ರಿಕೆ ತನ್ನ ಮೊದಲ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿರುವ ಸಾಧಕರ ಸನ್ಮಾನ-ಪ್ರಶಸ್ತಿಗೆ ಗಡಿನಾಡು ಕಾಸರಗೋಡಿನ ವಾಮನರಾವ್ ಬೇಕಲ್ ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರದಾನ ಸಮಾರಂಭ ಡಿ. 19ರಂದು ಸಂಜೆ 4ಕ್ಕೆ ಮಾರಿಯಮ್ಮನಹಳ್ಳಿ ದುರ್ಗಾ ದಾಸ್ ಕಲ್ಯಾಣ ಮಂಟಪದಲ್ಲಿ ಜರುಗಲಿರುವುದು.
ವಾಮನ ರಾವ್ ಬೇಕಲ್ ಹೊರತಾಗಿ ಮೈಸೂರಿನ ಶ್ರೀ ಟಿ. ತ್ಯಾಗರಾಜು, ಮಂಗಳೂರಿನ ಡಾ ಕೊಳ್ಚಪ್ಪೆ ಗೋವಿಂದ ಭಟ್, ಹೊಸಪೇಟೆಯ ಅನುಪಮಾ ಸುಲಾಖೆ ಮತ್ತು ಕಡೂರಿನ ಎಚ್ ಸುಂದರಮ್ಮ ಆಯ್ಕೆಯಾಗಿದ್ದಾರೆ. ವಾಮನ ರಾವ್ ಬೇಕಲ್ ಅವರು ಗಡಿನಾಡು ಕಾಸರಗೋಡಿನವರಾಗಿದ್ದು ಧಾರ್ಮಿಕ ಮತ್ತು ಸಾಮಾಜಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಸುಮಾರು 10000 ಪುಸ್ತಕಗಳಿರುವ ಗ್ರಂಥ ಭಂಡಾರವನ್ನು ಸಾರ್ವಜನಿಕರಿಗಾಗಿ ನಡೆಸುತ್ತಿದ್ದಾರೆ. ಅವರ ಸಾಧನೆಗಾಗಿ ಹಲವು ಪ್ರಶಸ್ತಿಗಳು ಈಗಾಗಲೇ ಅವರಿಗೆ ಸಂದಿವೆ.





