ಕಾಸರಗೋಡು: ಕೇರಳದಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಹಣ ಪೂರೈಸದೆ ನವಕೇರಳ ಯಾತ್ರೆ ನಡೆಸುತ್ತಿರುವುದನ್ನು ಪ್ರತಿಭಟಿಸಿ ಯುವಕಾಂಗ್ರೆಸ್ ಕಾರ್ಯಕರ್ತರು ನಡೆಸುತ್ತಿರುವ ಪ್ರತಿಭಟನಾಕಾರರ ಮೇಲೆ ಸಿಎಂ ಅಂಗರಕ್ಷಕರು, ಪೊಲೀಸ್ ಹಾಗೂ ಸಿಪಿಎಂ-ಡಿವೈಎಫ್‍ಐ ನೇತೃತ್ವದಲ್ಲಿ ನಡೆಸುತ್ತಿರುವ ದೌರ್ಜನ್ಯ ಖಂಡಿಸಿ ಕಾಂಗ್ರೆಸ್ ಜಿಲ್ಲೆಯ ವಿವಿಧ ಮಂಡಲ ಸಮಿತಿ ವತಿಯಿಂದ ನಡೆಸುತ್ತಿರುವ ಪೊಲೀಸ್ ಠಾಣೆಗಳಿಗೆ ಮುತ್ತಿಗೆ ಹಿನ್ನೆಲೆಯಲ್ಲಿ ಕಾಸರಗೋಡುನಗರ ಠಾಣೆ ಎದುರು ಧರಣಿ ನಡೆಸಲಾಯಿತು.
ಕಾಸರಗೋಡು, ಚೆಂಗಳ ಮತ್ತು ಮಧೂರು, ಮೊಗ್ರಾಲ್ ಪುತ್ತೂರು ಮಂಡಲ ಕಾಂಗ್ರೆಸ್ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ಕಾಸರಗೋಡು ಟೌನ್ ಪೆÇಲೀಸ್ ಠಾಣೆಗೆ ನಡೆದ ಪ್ರತಿಭಟನಾ ಮೆರವಣಿಗೆ ಹಾಗೂ ಧರಣಿಯನ್ನು ಕೆಪಿಸಿಸಿ ಸದಸ್ಯ ಪಿ.ಎ ಅಶ್ರಫಲಿ ಉದ್ಘಾಟಿಸಿದರು.
ಕಾಸರಗೋಡು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಂ.ರಾಜೀವನ್ ನಂಬಿಯಾರ್ ಅಧ್ಯಕ್ಷತೆ ವಹಿಸಿದ್ದರು. ಡಿಸಿಸಿ ಪ್ರಧಾನ ಕಾರ್ಯದರ್ಶಿ ಸಿ.ವಿ.ಜೇಮ್ಸ್, ಮೀನುಗಾರರ ಕಾಂಗ್ರೆಸ್ ಅಖಿಲ ಭಾರತ ಪ್ರಧಾನಕಾರ್ಯದರ್ಶಿ ಆರ್ ಗಂಗಾಧರನ್, ಜಿ ನಾರಾಯಣನ್, ಅಬ್ದುಲ್ ಖಾದರ್, ಶೈಲಜಾ. ಉಷಾ, ರಹನಾ ಮೊದಲಾದವರು ಉಪಸ್ಥಿತರಿದ್ದರು.
ಎಣ್ಮಕಜೆ, ಬದಿಯಡ್ಕ, ಕುಂಬ್ಡಾಜೆ ಮಂಡಲ ಸಮಿತಿ ವತಿಯಿಂದ ಬದಿಯಡ್ಕ ಪೊಲೀಸ್ ಠಾಣೆ ಎದುರು ನಡೆದ ಧರಣಿಯನ್ನು ಎಣ್ಮಕಜೆ ಗ್ರಾಪಂ ಅಧ್ಯಕ್ಷ ಸೋಮಶೇಖರ ಜೆ.ಎಸ್ ಉದ್ಘಾಟಿಸಿದರು. ಶ್ಯಾಂ ಪ್ರಸಾದ್ ಮಾನ್ಯ ಅಧ್ಯಕ್ಷತೆ ವಹಿಸಿದ್ದರು. ಕುಂಬಳೆ ಮಂಡಲ ಸಮಿತಿ ವತಿಯಿಂದ ಕುಂಬಳೆ ಪೊಲೀಸ್ ಠಾಣೆ ಎದುರು ನಡೆದ ಧರಣಿಯನ್ನು ಎಂ. ಮಂಜುನಾಥ ಆಳ್ವ ಉದ್ಘಾಟಿಸಿದರು.ಲೋಕನಾಥ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು ನೂರಾರು ಮಂದಿ ಕಾರ್ಯಕರ್ತರು ಪೊಲೀಸ್ ಠಾಣೆ ಬಳಿ ಮೆರವಣಿಗೆಯಲ್ಲಿ ಸಾಗುತ್ತಿದ್ದಂತೆ ಠಾಣೆಯಿಮದ ಅನತಿ ದೂರದಲ್ಲಿ ಬಾರಿಕೇಡ್ ನಿರ್ಮಿಸಿ ಧರಣಯನ್ನು ಪೊಲೀಸರುÂ ತಡೆಹಿಡಿದರು.

