ಬದಿಯಡ್ಕ: ಯೋಗಾಸನ ಭಾರತ್, ಯೋಗಾಸನ ಸ್ಪೋಟ್ರ್ಸ್ ಅಸೋಸಿಯೇಶನ್ ಕೇರಳ ಇತ್ತೀಚೆಗೆ ಕಲ್ಲಿಕೋಟೆ ಎಂ.ಎಸ್.ವಿದ್ಯಾಮಂದಿರದಲ್ಲಿ ನಡೆಸಿದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕಾಸರಗೋಡು ಜಿಲ್ಲೆಯ ಯೋಗಾಸನ ಸ್ಪೋಟ್ರ್ಸ್ ಅಸೋಸಿಯೇಶನ್‍ನ ವಿದ್ಯಾರ್ಥಿನಿ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 6ನೇ ತರಗತಿಯಲ್ಲಿ ಕಲಿಯುತ್ತಿರುವ ಸನ್ನಿಧಿ ಪಿ. ಪಳ್ಳತ್ತಡ್ಕ ಪ್ರಥಮ ಸ್ಥಾನ ಪಡೆದಿರುತ್ತಾಳೆ.
ಪಂಜಾಬ್‍ನ ಜಲಂಧರ್ ನ ಲವ್ಲೀ ಫ್ರೊಫೆಶನಲ್ ಯೂನಿವರ್ಸಿಟಿಯಲ್ಲಿ ಜರಗುತ್ತಿರುವ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ಅರ್ಹತೆಯನ್ನು ಪಡೆದಿರುತ್ತಾಳೆ. ಕಾಸರಗೋಡಿನ ಯೋಗ ಫೋರ್ ಕಿಡ್ಸ್‍ನ ಶಿಕ್ಷಕಿ ತೇಜಕುಮಾರಿಯವರ ಮಾರ್ಗದರ್ಶನದಲ್ಲಿ ಪಳಗಿದ ಈಕೆ ಪಳ್ಳತ್ತಡ್ಕ ಕೇಶವಶರ್ಮ ಹಾಗೂ ದಿವ್ಯಾ ಇವರ ಪುತ್ರಿ. ಈಕೆಯ ಸಾಧನೆಗೆ ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ ರಕ್ಷಕ ಶಿಕ್ಷಕ ಸಂಘ, ಮುಖ್ಯೋಪಾಧ್ಯಾಯರು, ಆಡಳಿತಮಂಡಳಿ ಅಭಿನಂದನೆಯನ್ನು ಸಲ್ಲಿಸಿದೆ.




