ಕಾಸರಗೋಡು: ಕೇರಳ ರಾಜ್ಯ ಉನ್ನತ ಶಿಕ್ಷಣ ಮಂಡಳಿಯ ಆಶ್ರಯದಲ್ಲಿ ಪಡನ್ನಕ್ಕಾಡ್‍ನ ನೆಹರು ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಓರಿಯಂಟೇಶನ್ ತರಗತಿ ನಡೆಯಿತು.
ನಾಲ್ಕು ವರ್ಷಗಳ ಪದವಿ ಪೂರ್ವ ಶಿಕ್ಷಣ ಕಾರ್ಯಕ್ರಮದ ಓರಿಯಂಟೇಶನ್ ತರಗತಿಯಲ್ಲಿ ಜಿಲ್ಲೆಯ ವಿವಿಧ ಕಾಲೇಜುಗಳಿಂದ ಆಯ್ಕೆಯಾದ ನೂರು ಪ್ರತಿನಿಧಿಗಳು ಭಾಗವಹಿಸಿದ್ದರು. ಕೇರಳ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷ ಡಾ.ರಾಜನ್ ಗುರುಕಲ್ ಆನ್‍ಲೈನ್‍ನಲ್ಲಿ ಉದ್ಘಾಟಿಟಿದರು. ಕೆಎಸ್ ಎಚ್ ಇ ಸಿ ಸದಸ್ಯ ಕಾರ್ಯದರ್ಶಿ ಡಾ.ರಾಜನ್ ವರ್ಗೀಸ್ ಪ್ರಧಾನ ಭಾಷಣ ಮಾಡಿದರು. ಪ್ರಾಂಶುಪಾಲ ಡಾ.ಕೆ.ವಿ.ಮುರಳಿ ಅಧ್ಯಕ್ಷತೆ ವಹಿಹಿದ್ದರು. ಕಣ್ಣೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಎ.ಅಶೋಕನ್ ಮಾತನಾಡಿದರು. ಡಾ.ಎ.ಮೋಹನನ್ ಸ್ವಾಗತಿಸಿದರು. ಡಾ.ಕೆ.ಸುಧೀಂದ್ರನ್, ಡಾ.ಟಿಂಜು ಪಿ.ಜೇಮ್ಸ್ ಮತ್ತು ಡಾ.ಮನುಲಾಲ್ ಪಿ.ರಾಮ್ ವಿವಿಧ ವಿಷಯಗಳ ಕುರಿತು ತರಗತಿ ನಡೆಸಿದರು.





