ಕಾಸರಗೋಡು: ಅಣಂಗೂರಿನ ಸಖಿ ವನ್ ಸ್ಟಾಪ್ ಸೆಂಟರ್ ನಲ್ಲಿ ಒಂದು ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸೈಕೋ ಸೋಶಿಯಲ್ ಕೌನ್ಸಿಲರ್ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿದಾರರು 25-40 ವರ್ಷ ವಯಸ್ಸಿನ ಮಹಿಳೆಯರಾಗಿರಬೇಕು. ಅರ್ಹತೆ: ಸೋಶಿಯಲ್ ವರ್ಕ್ / ಮೆಡಿಕಲ್ ಅಂಡ್ ಸೈಕಿಯಾಟ್ರಿಕ್ ಸೋಶಿಯಲ್ ವರ್ಕ್ / ಕ್ಲಿನಿಕಲ್ ಸೈಕಾಲಜಿಯಲ್ಲಿ ಸ್ನಾತಕೋತ್ತರ ಪದವಿ, ರಾಜ್ಯ / ಜಿಲ್ಲಾ ಮಟ್ಟದಲ್ಲಿರುವ ಮೆಂಟಲ್ ಹೆಲ್ತ್ ಸಂಸ್ಥೆ / ಕ್ಲಿನಿಕ್ ಗಳಲ್ಲಿ ಕೌನ್ಸಿಲರ್ ಹುದ್ದೆಯಲ್ಲಿ ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಕೆಲಸದ ಅನುಭವವಿರಬೇಕು. ಆಸಕ್ತ ಅಭ್ಯರ್ಥಿಗಳು ಬಯೋಡಾಟ, ವಿದ್ಯಾಭ್ಯಾಸ ಸರ್ಟಿಫಿಕೇಟಿನ ಸ್ವಯಂ ದೃಢೀಕರಿಸಿದ ಪ್ರತಿಗಳು, ಅನುಭವದ ಸರ್ಟಿಫಿಕೇಟ್ ಎಂಬಿವುಗಳ ಸಹಿತ ಕಾಸರಗೋಡು ಸಿವಿಲ್ ಸ್ಟೇಷನಿನ ವಿಮನ್ ಪ್ರೊಟೆಕ್ಷನ್ ಆಫೀಸಿನಲ್ಲಿ ಡಿಸೆಂಬರ್ 28 ರಂದು ಸಂಜೆ 5 ಗಂಟೆಯೊಳಗೆ ಅರ್ಜಿ ಸಲ್ಲಿಸಬೇಕು. ಇಮೇಲ್ wpoksgd@gmail.com. ದೂರವಾಣಿ ಸಂಖ್ಯೆ 04994 256266, 9446270127. ವಿಳಾಸ ವಿಮನ್ ಪ್ರೊಟೆಕ್ಷನ್ ಆಫೀಸರ್ ಕಾರ್ಯಾಲಯ, ಸಿವಿಲ್ ಠಾಣೆ, 3ನೇ ಮಹಡಿ, ವಿದ್ಯಾನಗರ, ಕಾಸರಗೋಡು, ಪಿನ್ 671123.




