ಕಾಸರಗೋಡು: ಕೇರಳ ನಾಲೆಡ್ಜ್ ಎಕಾನಮಿ ಮಿಷನ್ ಆಯೋಜಿಸುವ ಜಿಲ್ಲಾ ಕೌಶಲ್ಯ ಮೇಳವು ಡಿ.17 ರಂದು ಕಾಞಂಗಾಡ್ ನೆಹರು ಆರ್ಟ್ ಆಂಡ್ ಸಯನ್ಸ್ ಕಾಲೇಜಿನಲ್ಲಿ ನಡೆಯಲಿದೆ. ಉದ್ಯೋಗಕ್ಕಾಗಿ ಅಭ್ಯರ್ಥಿಗಳನ್ನು ಸಜ್ಜುಗೊಳಿಸಲು ವಿಶೇಷವಾಗಿ ಆಯ್ಕೆ ಮಾಡಲಾದ 20 ಕ್ಷೇತ್ರಗಳಲ್ಲಿ 100 ಕ್ಕೂ ಹೆಚ್ಚು ಕೌಶಲ್ಯ ತರಬೇತಿ ಕಾರ್ಯಕ್ರಮಗಳನ್ನು ಇದರ ಭಾಗವಾಗಿ ಪ್ರದರ್ಶಿಸಲಾಗುತ್ತದೆ. 1000 ಕ್ಕೂ ಹೆಚ್ಚು ಆಯ್ದ ಉದ್ಯೋಗಗಳಿಗೆ ರಿಜಿಸ್ಟ್ರೇಷನ್, ನಾಲೆಡ್ಜ್ ಮಿಷನ್ ಮೂಲಕ ನೀಡುವ ಉಚಿತ ಕೆರಿಯರ್ ಡೆವಲಪ್ಮೆಂಟ್ ಸರ್ವೀಸ್ ಗಳು, ಸ್ಕಿಲ್ ಸ್ಕಾಲರ್ಶಿಪ್. ಇಂಟರ್ನ್‌ಶಿಪುಗಳು, ಅಪ್ರೆಂಟಿಸ್‌ಶಿಪುಗಳು ವಿವಿಧ ಇಂಡಸ್ಟ್ರಿಗಳ ನೇತೃತ್ವದಲ್ಲಿರುವ ಮಾಸ್ಟರ್ ಸೆಷನ್‌ಗಳು ಕೌಶಲ್ಯ ಮೇಳದ ಭಾಗವಾಗಿ ನಡೆಯಲಿವೆ. ಸ್ಪಾಟ್ ರಿಜಿಸ್ಟ್ರೇಷನ್ ಇರುತ್ತದೆ. ಜಿಲ್ಲಾ ಕೌಶಲ್ಯ ಮೇಳದಲ್ಲಿ 18 ರಿಂದ 58 ವರ್ಷದೊಳಗಿನ ಯಾವುದೇ ವ್ಯಕ್ತಿಗೆ ಉಚಿತವಾಗಿ ಭಾಗವಹಿಸಬಹುದು. ರಿಜಿಸ್ಟ್ರೇಷನ್ ಮಾಡಲು ಇಮೇಲ್ www.knowledgemission.kerala.gov.in. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0471 2737881 ಸಂಪರ್ಕಿಸಿ.