ಕಾಸರಗೋಡು: ಕಾಞಂಗಾಡು ¥ನಗರಸಭಾ ವ್ಯಾಪ್ತಿಯಲ್ಲಿ ರಾಜ್ಯ, ರಾಷ್ಟ್ರೀಯ ಹೆದ್ದಾರಿ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಅಳವಡಿಸಿರುವ ಎಲ್ಲಾ ಅನಧಿಕೃತ ಜಾಹೀರಾತು ಫಲಕ, ಬ್ಯಾನರ್, ಹೋಡಿರ್ಂಗ್‍ಗಳು ಮತ್ತು ಧ್ವಜಸ್ತಂಭಗಳನ್ನು ಅಳವಡಿಸಿರುವವರು ಒಂದು ವಾರದೊಳಗೆ ಅದನ್ನು ತೆರವುಗೊಳಿಸಬೇಕು. ತಪ್ಪಿದಲ್ಲಿ ನಗರಸಭೆಯೇ ಖುದ್ದಾಗಿ ಈ ಫಲಕ, ಬ್ಯಾನರ್‍ಗಳನ್ನು ತೆರವುಗೊಳಿಸಿ, ಇದಕ್ಕೆ ತಗಲುವ ವೆಚ್ಚ ಹಾಗೂ ದಂಡವನ್ನು ಬೋರ್ಡ್ ಅಳವಡಿಸಿದವರಿಂದ ವಸೂಲಿ ಮಾಡಲಾಗುವುದು ಎಂದು ಕಾಞಂಗಾಡು ನಗರಸಭಾ ಕಾರ್ಯದರ್ಶಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

