ಕಾಸರಗೋಡು: ವಿದ್ಯಾರ್ಥಿ ಪ್ರಯಾಣ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ಆಯೋಜಿಸಲಾಯಿತು. ಕಾಸರಗೋಡು ಚಂದ್ರಗಿರಿ ಮಾರ್ಗದ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಸುಮಾರು 3ಸಾವಿರ ಪಾಸ್‍ಗಳನ್ನು ವಿತರಿಸಲಾಗಿದೆ. ಅರ್ಜಿ ಸಲ್ಲಿಸಿದ ಎಲ್ಲರಿಗೂ ಮಂಗಳೂರಿಗೆ ಶೇ.30 ರಷ್ಟು ರಿಯಾಯಿತಿ ಮೂಲಕ ಪಾಸ್ ಒದಗಿಸುವ ಕಾರ್ಯ ಪೂರ್ತಿಗೊಂಡಿರುವುದಗಿ ಕೆಎಸ್‍ಆರ್‍ಟಿಸಿ ಕಾಸರಗೋಡು ಇನ್ಸ್‍ಪೆಕ್ಟರ್ ಎಸ್.ರಾಜು ತಿಳಿಸಿದ್ದಾರೆ.
2024ರ ಜನವರಿ 1ರಿಂದ ರಾಜ್ಯದ ಖಾಸಗಿ ಬಸ್‍ಗಳಲ್ಲಿ ಪ್ರಯಾಣ ಪ್ರಯೋಜನ ಪಡೆಯಲು 27 ವರ್ಷಗಳ ವಯೋಮಿತಿಯನ್ನು ನಿಗದಿಪಡಿಸಿದ ಸರ್ಕಾರದ ಆದೇಶದ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣವನ್ನು ಕೋರಲಾಗುವುದು. ಹೊಸದಾಗಿ ಆರಂಭಗೊಳ್ಳುತ್ತಿರುವ ಖಾಸಗಿ ಕಾಲೇಜುಗಳಿಗೆ ಪಾಸ್ ನೀಡುವ ಮುನ್ನ ಸಮಗ್ರ ತನಿಖೆ ನಡೆಸಬೇಕಾದ ಅಗತ್ಯವಿರುವುದಾಗಿ ಸಭೆಯಲ್ಲಿ ಆಗ್ರಹಿಸಲಾಯಿತು.
ಎಂಡೋಸಲ್ಫಾನ್ ಸೆಲ್ ಸಹಾಯಕ ಜಿಲ್ಲಾಧಿಕಾರಿ ಪಿ.ಸುರ್ಜಿತ್, ಆರ್‍ಟಿಒ ಎ.ಸಿ.ಶೀಬಾ, ಕೆಎಸ್‍ಆರ್‍ಟಿಸಿ ಇನ್ಸ್‍ಪೆಕ್ಟರ್ ಎಸ್.ರಾಜು, ಎಸ್‍ಐ ಕೆ.ಪಿ.ವಿ.ರಾಜೀವ್, ಪೆರಿಯ ಪಾಲಿಟೆಕ್ನಿಕ್ ಪ್ರಾಂಶುಪಾಲ ಪಿ.ನಾರಾಯಣ ನಾಯ್ಕ್, ಕಾಸರಗೋಡು ಸರ್ಕಾರಿ ಕಾಲೇಜಿನ ಪ್ರತಿನಿಧಿ ಎನ್. ಕೆ. ಶಬಸ್ ಮಾಲೀಕರ ಸಂಘಟನೆಯ ಪ್ರತಿನಿಧಿಗಳಾದ ಸಿ.ಎ.ಮುಹಮ್ಮದ್‍ಕುಞÂ, ಕೆ.ಗಿರೀಶ್, ಟಿ.ಲಕ್ಷ್ಮಣನ್ ಭಾಗವಹಿಸಿದ್ದರು. ವಿದ್ಯಾರ್ಥಿಗಳ ಪ್ರಯಾಣಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.


