ತಿರುವನಂತಪುರಂ: ಕೇರಳದಲ್ಲಿ ಮಹಿಳೆಯೊಬ್ಬರು ಅತ್ತೆಯನ್ನು ಥಳಿಸುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಆಕೆಯನ್ನು ಬಂಧಿಸಲಾಗಿದೆ.
ದೃಶ್ಯಗಳಲ್ಲಿ, ಶಾಲಾ ಶಿಕ್ಷಕಿಯಾಗಿರುವ 37 ವರ್ಷದ ಮಹಿಳೆ ತನ್ನ ವಯಸ್ಸಾದ ಅತ್ತೆಗೆ ಮುಷ್ಠಿಯಿಂದ ಗುದ್ದುವುದು.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊ ವೈರಲ್ ಆಗುತ್ತಿದ್ದಂತೆ ಬಳಕೆದಾರರು ಅತ್ತೆ ಮೇಲೆ ದೌರ್ಜನ್ಯ ಎಸಗಿದ ಸೊಸೆ ತೆವಳಕ್ಕರ ನಡುವಿಲಕ್ಕರ ಮಂಜುಮೋಳ್ ಥಾಮಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದರು, ಕೇರಳ ಪೊಲೀಸರನ್ನು ಟ್ಯಾಗ್ ಮಾಡಿ, ಮಧ್ಯಪ್ರವೇಶಿಸುವಂತೆ ಕೇಳಿಕೊಂಡರು. ತಕ್ಷಣವೇ ಪ್ರತಿಕ್ರಿಯಿಸಿದ ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡು ಆರೋಪಿ ತೆವಳಕ್ಕರ ನಡುವಿಲಕ್ಕರ ಮಂಜುಮೋಳ್ ಥಾಮಸ್ ಎಂಬಾಕೆಯನ್ನು ತೆಕ್ಕುಂಭಾಗಂ ಪೊಲೀಸರು ಬಂಧಿಸಿದರು.
ಬುಧವಾರ ಸಂಜೆ ಹಲ್ಲೆಗೊಳಗಾದ ಅತ್ತೆ ಎಲಿಯಮ್ಮ ವರ್ಗೀಸ್ ಅವರು ಚವರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದಿದ್ದು, ನಂತರ ಅವರು ತಮ್ಮ ಮಗ ಜೈಸಿನ್ ಮತ್ತು ಆತನ ಸ್ನೇಹಿತನೊಂದಿಗೆ ಪೊಲೀಸ್ ಠಾಣೆಗೆ ಆಗಮಿಸಿ ದೂರು ದಾಖಲಿಸಿದ್ದರು.
ಬಂಧಿಸಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೊವನ್ನು ಹಂಚಿಕೊಂಡ ಬಳಕೆದಾರರಲ್ಲಿ ಕಾರ್ಯಕರ್ತೆ ದೀಪಿಕಾ ನಾರಾಯಣ ಭಾರದ್ವಾಜ್, ತಮ್ಮ ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ, 'ಸಮಾಜದಲ್ಲಿ ವಯಸ್ಸಾದವರ ಮೇಲಿನ ದೌರ್ಜನ್ಯವು ಹೆಚ್ಚುತ್ತಿದೆ. ಇದು ಅನಾರೋಗ್ಯಕರ ಬೆಳವಣಿಗೆಯಾಗಿದೆ, ವಯಸ್ಸಾದ ಮಹಿಳೆಯನ್ನು ನಿಂದಿಸಲು ಆಕೆ ಮಗುವಿಗೆ ಸಹ ತರಬೇತಿ ನೀಡುತ್ತಿರುವುದು ಸರಿಯಲ್ಲ. ಪೊಲೀಸರು ಕೂಡಲೇ ಆಕೆಯನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದರು.
ಪೋಸ್ಟ್‌ನಲ್ಲಿ ಕೇರಳ ಪೊಲೀಸರನ್ನೂ ಟ್ಯಾಗ್ ಮಾಡಿದ್ದರು. ಎಕ್ಸ್‌ನಲ್ಲಿನ ಪೋಸ್ಟ್‌ಗೆ ಪ್ರತಿಕ್ರಿಯೆಯಾಗಿ, ದೌರ್ಜನ್ಯಕ್ಕೆ ಕಾರಣವಾದ ಮಹಿಳೆಯನ್ನು ಡಿ.14 ರಂದು ಬಂಧಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.
ಮಂಜುಮೋಳ್ ವಿರುದ್ಧ ಪಾಲಕರು ಮತ್ತು ಹಿರಿಯ ನಾಗರಿಕರ ನಿರ್ವಹಣೆ ಮತ್ತು ಕಲ್ಯಾಣ ಕಾಯ್ದೆಯ ಸೆಕ್ಷನ್ 24 ಮತ್ತು ಐಪಿಸಿಯ 308 (ಅಪರಾಧ ನರಹತ್ಯೆಗೆ ಯತ್ನ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



