HEALTH TIPS

ಶಬರಿಮಲೆ: 18 ಮೆಟ್ಟಿಲುಗಳ ಪಕ್ಕ ಶಿಲಾಸ್ತಂಭ- ವ್ಯಾಪಕ ಟೀಕೆ

             ತಿರುವನಂತಪುರ: ಶಬರಿಮಲೆಯಲ್ಲಿ ಸಮರ್ಪಕ ನಿರ್ವಹಣೆ ಇಲ್ಲ ಎಂದು ಆರೋಪಿಸಿ ಯಾತ್ರಿಗಳು ಪ್ರತಿಭಟನೆ ನಡೆಸಿದ್ದು ಒಂದೆಡೆಯಾದರೆ, ದೇವಸ್ಥಾನದ 18 ಮೆಟ್ಟಿಲುಗಳ ಇಕ್ಕೆಲದಲ್ಲಿ ಶಿಲಾಸ್ತಂಭಗಳನ್ನು ಅಳವಡಿಸಿರುವುದಕ್ಕೆ ಈಗ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದೆ.

              ಮೆಟ್ಟಿಲ ಮೇಲೆ, ಮಡಿಸಬಹುದಾದ ಚಾವಣಿಯನ್ನು ಅಳವಡಿಸುವುದಕ್ಕಾಗಿ ಈ ಶಿಲಾಸ್ತಂಭಗಳನ್ನು ಅಳವಡಿಸಲಾಗಿದೆ ಎನ್ನಲಾಗಿದೆ.

             'ಈ ಶಿಲಾಸ್ತಂಭಗಳು ದೇವರ ದರ್ಶನಕ್ಕೆ ಅಡ್ಡಿಯನ್ನುಂಟು ಮಾಡುತ್ತಿವೆ' ಎಂದು ಕೆಲ ಭಕ್ತರ ಆಕ್ಷೇಪವಾಗಿದ್ದರೆ, ಈ ಸ್ತಂಭಗಳಿಂದಾಗಿ ನೂಕುನುಗ್ಗಲು ಉಂಟಾಯಿತು ಎಂದೂ ಕೆಲವರು ಟೀಕಿಸಿದ್ದಾರೆ.

ಶಿಲಾಸ್ತಂಭಗಳ ಕುರಿತು ಟೀಕೆಗಳು ವ್ಯಕ್ತವಾಗುತ್ತಿರುವುದನ್ನು ಪೊಲೀಸರು ತಿರುವಾಂಕೂರು ದೇವಸ್ಥಾನ ಮಂಡಳಿ ಗಮನಕ್ಕೆ ತಂದಿದ್ದಾರೆ ಎಂದು ಮೂಲಗಳು ಹೇಳಿವೆ.

               'ಈ ಶಿಲಾಸ್ತಂಭಗಳಿಂದ ಪೊಲೀಸರ ಕರ್ತವ್ಯ ನಿರ್ವಹಣೆಗೂ ಅಡ್ಡಿಯಾಗುತ್ತಿದೆ. ಭಕ್ತರ ದಟ್ಟಣೆ ನಿರ್ವಹಣೆಗೂ ತೊಂದರೆಯಾಗುತ್ತಿರುವ ಕಾರಣ, ಇವುಗಳನ್ನು ಅಳವಡಿಸುವ ಕುರಿತು ಮರುಚಿಂತನೆ ಮಾಡಬೇಕು ಎಂಬುದಾಗಿ ಪೊಲೀಸರು ಮಂಡಳಿಗೆ ತಿಳಿಸಿದ್ದಾರೆ' ಎಂದು ಇವೇ ಮೂಲಗಳು ಹೇಳಿವೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries