HEALTH TIPS

ವಿವೋ-ಇಂಡಿಯಾ | ಹಣ ಅಕ್ರಮ ವರ್ಗಾವಣೆ ಪ್ರಕರಣ: ಮತ್ತೆ ಮೂವರ ಬಂಧನ

                 ವದೆಹಲಿ: ಚೀನಾದ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿಗಳಾದ ವಿವೋ-ಇಂಡಿಯಾ ಮತ್ತು ಇತರ ಕೆಲವು ಕಂಪನಿಗಳ ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಮೂವರನ್ನು ಜಾರಿ ನಿರ್ದೇಶನಾಲಯವು ಶನಿವಾರ ಬಂಧಿಸಿದೆ.

                 ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ಮೂವರನ್ನು ವಶಕ್ಕೆ ಪಡೆಯಲಾಗಿದೆ. ಆದರೆ ಮೂವರ ಗುರುತುಗಳನ್ನು ಸದ್ಯಕ್ಕೆ ಬಹಿರಂಗ ಪಡಿಸಿಲ್ಲ.

              ಲಾವಾ ಇಂಟರ್‌ನ್ಯಾಷನಲ್‌ ಮೊಬೈಲ್‌ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಹರಿ ಓಂ ರೈ, ಚೀನಾ ಪ್ರಜೆ ಗುವಾಂಗ್‌ವೆನ್‌ ಅಲಿಯಾಸ್‌ ಅಂಡ್ರ್ಯೋ ಕುವಾಂಗ್‌, ಚಾರ್ಟೆಡ್‌ ಅಕೌಂಟೆಂಟ್‌ಗಳಾದ ನಿತಿನ್‌ ಗರ್ಗ್‌ ಮತ್ತು ರಂಜನ್‌ ಮಲಿಕ್ ಅವರನ್ನು ಇ.ಡಿ ಈಗಾಗಲೇ ಬಂಧಿಸಿದೆ. ಪ್ರಸ್ತುತ ಈ ನಾಲ್ವರು ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

                   ವಿವೋ ಕಂಪನಿಯು ಭಾರತದಲ್ಲಿ ತೆರಿಗೆ ಪಾವತಿಸುವುದನ್ನು ತಪ್ಪಿಸಲು ತನ್ನ ವಹಿವಾಟಿನ ಶೇ 50ರಷ್ಟು ಮೊತ್ತ, ಅಂದರೆ ಸುಮಾರು ₹ 62,476 ಕೋಟಿಯನ್ನು ಚೀನಾಗೆ ರವಾನಿಸಿದೆ ಎಂದು ಇ.ಡಿ ಆರೋಪಿಸಿತ್ತು.

                   ವಿವೋ ಮೊಬೈಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ ಹಾಗೂ ಇದರ ಸಹಭಾಗಿಯಾಗಿರುವ ವಿವಿಧ ಕಂಪನಿಗಳ ಮೇಲೆ ಇ.ಡಿ ಜುಲೈ 5ರಂದು ದಾಳಿ ನಡೆಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries