HEALTH TIPS

ಶ್ರೀಕೃಷ್ಣಯ್ಯ ಅನಂತಪುರ ಕೃತಿಗೆ 'ಭೂಮಿ ಸಾಹಿತ್ಯ ಪುರಸ್ಕಾರ'

             ಕುಂಬಳೆ: ಭೂಮಿ ಪ್ರತಿಷ್ಠಾನ ಧಾರವಾಡ, ಅರವಳದ ಪ್ರತಿಷ್ಠಾನ ಸತ್ತೂರು-ದಿ.ಯಲ್ಲಪ್ಪ ಅರವಳದ ಅವರ ಸ್ಮರಣಾರ್ಥ ಕರ್ನಾಟಕ ರಾಜ್ಯ ಮಟ್ಟದ (ಹೊರನಾಡ ಕನ್ನಡಿಗರೂ ಸೇರಿ) ಭೂಮಿ ಸಾಹಿತ್ಯ ಪುರಸ್ಕಾರಕ್ಕಾಗಿ ಖ್ಯಾತ ಸಾಹಿತಿ ಶ್ರೀಕೃಷ್ಣಯ್ಯ ಅನಂತಪುರ ಅವರ 'ಬೇರುಗಳು ಅಮ್ಮನ ಹಾಗೆ' ಕವನ ಸಂಕಲನ ಆಯ್ಕೆಯಾಗಿದೆ. 

            ವಿವಿಧೆಡೆಯಿಂದ ಲಭಿಸಿದ ಬೇರೆ ಬೇರೆ ಸಾಹಿತ್ಯ ಪ್ರಕಾರಗಳ ಒಟ್ಟು ಎಪ್ಪತ್ತಾರು ಕೃತಿಗಳಲ್ಲಿ ತೀರ್ಪುಗಾರರು ಆರಿಸಿದ ಭೂಮಿ ಉತ್ತಮ ಹತ್ತು ಕೃತಿಗಳಲ್ಲಿ (ಭೂಮಿ ಟಾಪ್ ಟೆನ್ ಕೃತಿಗಳು) ಈ ಕವನ ಸಂಕಲನ ಆಯ್ಕೆ ಮಾಡಲಾಗಿದೆ. 

                ಡಿ. 23ರಂದು ಧಾರವಾಡದ ಕರ್ನಾಟಕ ವಿದ್ಯವರ್ಧಕ ಸಂಘ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಜರುಗಲಿರುವ  ಸಮಾರಂಭದಲ್ಲಿ ಪ್ರಶಸ್ತಿಪ್ರದಾನ ಮಾಡಲಾಗುವುದು ಎಂದು ಪ್ರಕಟಣೆ ತಿಳಿಸಿದೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries