ನವದೆಹಲಿ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಿರುವ ಕುರಿತು ಲೋಕಸಭೆ ಸದನ ಸಮಿತಿಯು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸಿದೆ. ಹೀಗಾಗಿ, ಅಧಿಕೃತ ನಿವಾಸವನ್ನು ತೊರೆಯುವಂತೆ ಶೀಘ್ರದಲ್ಲೇ ಮಹುವಾ ಅವರಿಗೆ ಸಚಿವಾಲಯ ಸೂಚಿಸುವ ನಿರೀಕ್ಷೆ ಇದೆ.
0
samarasasudhi
ಡಿಸೆಂಬರ್ 13, 2023
ನವದೆಹಲಿ: ಲೋಕಸಭೆಯಿಂದ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಉಚ್ಚಾಟಿಸಿರುವ ಕುರಿತು ಲೋಕಸಭೆ ಸದನ ಸಮಿತಿಯು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ತಿಳಿಸಿದೆ. ಹೀಗಾಗಿ, ಅಧಿಕೃತ ನಿವಾಸವನ್ನು ತೊರೆಯುವಂತೆ ಶೀಘ್ರದಲ್ಲೇ ಮಹುವಾ ಅವರಿಗೆ ಸಚಿವಾಲಯ ಸೂಚಿಸುವ ನಿರೀಕ್ಷೆ ಇದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಈ ದಿಸೆಯಲ್ಲಿ ಪ್ರಕ್ರಿಯೆಗಳಿಗೆ ಚಾಲನೆ ನೀಡಿದೆ ಎನ್ನಲಾಗಿದೆ.
ಸಂಸತ್ತಿನಲ್ಲಿ ಪ್ರಶ್ನೆ ಕೇಳಲು ಉದ್ಯಮಿ ದರ್ಶನ್ ಹೀರಾನಂದಾನಿ ಅವರಿಂದ ಮಹುವಾ ಹಣ ಪಡೆದಿದ್ದಾರೆ ಎಂದು ಸಂಸತ್ತಿನ ನೀತಿ ಸಮಿತಿಯು ನೀಡಿದ್ದ ವರದಿಯನ್ನು ಲೋಕಸಭೆ ಇತ್ತೀಚೆಗೆ ಅಂಗೀಕರಿಸಿದೆ. 'ಅನೈತಿಕ ನಡವಳಿಕೆ' ಕಾರಣ ನೀಡಿ ಅವರನ್ನು ಡಿಸೆಂಬರ್ 8ರಂದು ಲೋಕಸಭಾ ಸದಸ್ಯತ್ವದಿಂದ ಉಚ್ಚಾಟಿಸಿದೆ.