ಪತ್ತನಂತಿಟ್ಟ: ಇಂದಿನಿಂದ ಶಬರಿಮಲೆಯಲ್ಲಿ ವ್ಯವಸ್ಥಿತ ರೀತಿಯ ಸರತಿ ಸಾಲು ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರು ಮತ್ತು ಮಕ್ಕಳಿಗೆ ಪ್ರತ್ಯೇಕ ಸರತಿ ಸಾಲು ವ್ಯವಸ್ಥೆ ಮಾಡಲಾಗಿದೆ.
18 ಮೆಟ್ಟಿಲು ಹತ್ತುವ ಮಕ್ಕಳು ಹಾಗೂ ಮಹಿಳೆಯರಿಗೆ ವಿಶೇಷ ಸೌಲಭ್ಯ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಸನ್ನಿಧಿಯಲ್ಲಿ ಜನದಟ್ಟಣೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಹೊಸ ಕ್ರಮ ಕೈಗೊಳ್ಳಲಾಗಿದೆ. ಇಂದು ಬೆಳಗ್ಗೆ 6 ಗಂಟೆಯವರೆಗೆ 21,000 ಅಯ್ಯಪ್ಪ ಭಕ್ತರು 18 ಮೆಟ್ಟಿಲು ಏರಿರುವರು. ಶಬರಿಮಲೆಯಲ್ಲಿ ಬೆಳಗ್ಗೆ ಭಾರೀ ಮಳೆಯಾಗಿದೆ. ಸನ್ನಿಧಿಯ ನೂಕುನುಗ್ಗಲು ತಡೆಯಲಾಗದೆ ಭಕ್ತರು ಹಿಂತಿರುಗಿದ್ದರು. ಈ ಹಿನ್ನೆಲೆಯಲ್ಲಿ ಹೊಸ ಕ್ರಮ ಕೈಗೊಳ್ಳಲಾಗಿದೆ.





