ಕೋಝಿಕ್ಕೋಡ್: ತಮ್ಮ ವಿರುದ್ಧದ ಪ್ರತಿಭಟನೆಯ ಭಾಗವಾಗಿ ಕ್ಯಾಲಿಕಟ್ ವಿಶ್ವವಿದ್ಯಾಲಯದ ಕ್ಯಾಂಪಸ್‍ನಲ್ಲಿ ಎಸ್‍ಎಫ್‍ಐ ಹಾಕಿದ್ದ ಬ್ಯಾನರ್‍ಗಳನ್ನು ತೆಗೆಯುವಂತೆ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಅತಿಥಿಗೃಹದಿಂದ ಹೊರಬಂದ ನಂತರ ರಾಜ್ಯಪಾಲರು ಠಿಔಲೀಸರಿಗೆ ಸೂಚನೆ ನೀಡಿದರು. ಎಸ್‍ಎಫ್‍ಐಗಳಿಗೆ ಬ್ಯಾನರ್ ಕಟ್ಟಲು ಅವಕಾಶ ನೀಡಿರುವ ಕುರಿತು ಉಪಕುಲಪತಿಯಿಂದ ವಿವರಣೆ ಕೇಳುವಂತೆಯೂ ರಾಜಭವನ ಕಾರ್ಯದರ್ಶಿಗೆ ಸೂಚಿಸಿರುವರು.
ಬ್ಯಾನರ್‍ಗಳನ್ನು ಏಕೆ ತೆಗೆದಿಲ್ಲ ಎಂದು ರಾಜ್ಯಪಾಲರು ಪೋಲೀಸರ ಮೇಲೆ ವಾಗ್ದಾಳಿ ನಡೆಸಿದರು. ಇದಾದ ಬಳಿಕ ರಾಜ್ಯಪಾಲರು ಅತಿಥಿ ಗೃಹಕ್ಕೆ ಮರಳಿದರು. ರಾಜ್ಯಪಾಲರ ಆಗಮನಕ್ಕೂ ಮುನ್ನ ಹಾಕಲಾಗಿದ್ದ ಪೋಸ್ಟರ್ ಗಳನ್ನು ಇಲ್ಲಿಂದ ತೆಗೆಯದಿರುವುದು ಆರಿಫ್ ಮುಹಮ್ಮದ್ ಖಾನ್ ಕೋಪಕ್ಕೆ ಕಾರಣವಾಯಿತು. 'ಕುಲಪತಿ ಗೋ ಬ್ಯಾಕ್' ಮತ್ತು 'ಸಂಘಿ ಕುಲಪತಿ ವಾಪಾಸ್ ಜಾ' ಎಂಬ ಎಸ್‍ಎಫ್‍ಐ ಬ್ಯಾನರ್‍ಗಳು ರಾರಾಜಿಸುತ್ತಿದ್ದವು.
ರಾಜ್ಯಪಾಲರನ್ನು ಆರ್‍ಎಸ್‍ಎಸ್ ನಾಯಕ ಎಂದು ಎಸ್‍ಎಫ್‍ಐ ಟೀಕಿಸಿದೆ. 'ಮಿಸ್ಟರ್ ಚಾನ್ಸಲರ್ ಯು ಆರ್ ನಾಟ್ ವೆಲ್ಕಮ್' ಮತ್ತು 'ಸಂಘಿ ಕುಲಪತಿ ವಾಪಾಸ್ ಜಾವೋ' ಎಂಬ ಕಪ್ಪು ಬ್ಯಾನರ್‍ಗಳನ್ನು ಸಹ ಹಾರಿಸಲಾಗಿದೆ. ಎಸ್‍ಎಫ್‍ಐ ರಾಜ್ಯ ಕಾರ್ಯದರ್ಶಿ ಪಿಎಂ ಅರ್ಶೋ ಅವರು ಕೇರಳದ ವಿಶ್ವವಿದ್ಯಾಲಯಗಳ ಕುಲಪತಿಯೂ ಆಗಿರುವ ರಾಜ್ಯಪಾಲರನ್ನು ಕ್ಯಾಂಪಸ್‍ಗಳಿಗೆ ಪ್ರವೇಶಿಸಲು ಬಿಡದಂತೆ ಕರೆ ನೀಡಿದ್ದರು.





