ತಿರುವನಂತಪುರಂ: ನವಕೇರಳ ಸಮಾವೇಶದ ವೇಳೆ ಪ್ರತಿಭಟನಾಕಾರರನ್ನು ಥಳಿಸಿದ ಮುಖ್ಯಮಂತ್ರಿಗಳ ಗನ್ ಮ್ಯಾನ್ ಅನಿಲ್ ಕುಮಾರ್ ಹಾಗೂ ಪೆÇಲೀಸ್ ಸಂದೀಪ್ ಗೆ ಭದ್ರತೆ ಹೆಚ್ಚಿಸಲಾಗಿದೆ.
ಇಬ್ಬರ ಮನೆಗಳಿಗೂ ಪೋಲೀಸರು ಕಾವಲು ಹೆಚ್ಚಿಸಲಾಗಿದೆ. ಮ್ಯೂಸಿಯಂ ಪೆÇಟಕುಝಿ ಬಳಿಯಿರುವ ಸಂದೀಪ್ ನಿವಾಸ ಹಾಗೂ ಪೆರುರ್ಕಡದಲ್ಲಿರುವ ಅನಿಲ್ ನಿವಾಸಕ್ಕೆ ಭದ್ರತೆ ಹೆಚ್ಚಿಸಲಾಗಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ ಭದ್ರತೆ ಕೈಗೊಳ್ಳಲಾಗಿದೆ. ಆದೇಶ ತಿರುವನಂತಪುರಂ ಆಯುಕ್ತರ ಸುಪರ್ದಿಗಿರಲಿದೆ. ಮುಖ್ಯಮಂತ್ರಿಗೆ ಕಪ್ಪು ಬಾವುಟ ತೋರಿಸಿದ ಪ್ರತಿಭಟನಾಕಾರರ ಮೇಲೆ ಗನ್‍ಮ್ಯಾನ್ ಅನಿಲ್‍ಕುಮಾರ್ ಮತ್ತು ಸಿವಿಲ್ ಪೋಲೀಸ್ ಅಧಿಕಾರಿ ಸಂದೀಪ್ ಸೇರಿದಂತೆ ನಾಲ್ವರು ಥಳಿಸಿದ್ದಾರೆ.
ಅಲಪ್ಪುಳ ಕೈತವನ ಜಂಕ್ಷನ್‍ನಲ್ಲಿ ಮುಖ್ಯಮಂತ್ರಿಯವರ ವಾಹನದ ಮುಂದೆ ಪ್ರತಿಭಟನೆ ನಡೆಸಿದವರನ್ನು ಥಳಿಸಲು ಮುಖ್ಯಮಂತ್ರಿಯವರ ಗನ್ ಮೆನ್‍ಗಳು ಬಂದರು. ಪ್ರತಿಭಟನಾಕಾರರನ್ನು ನಿಭಾಯಿಸಲು ದಾರಿಯಲ್ಲಿ ಪೋಲೀಸರಿದ್ದರೂ, ಮುಖ್ಯಮಂತ್ರಿಗಳ ಅಧಿಕೃತ ವಾಹನದಲ್ಲಿ ಪ್ರಯಾಣಿಸುತ್ತಿದ್ದ ಗನ್‍ಮ್ಯಾನ್ ಅವರ ಮೇಲೆ ಹಲ್ಲೆ ನಡೆಸಲು ಮುಂದಾದರು. ‘ನವಕೇರಳ ಸಮಾವೇಶ ಸ್ವಯಂಸೇವಕರು’ ಎಂದು ಬರೆದ ಟೀ ಶರ್ಟ್‍ಗಳನ್ನು ಧರಿಸಿ ಅಧಿಕೃತ ಬೆಂಗಾವಲು ಪಡೆಯೊಂದಿಗೆ ಬಂದಿದ್ದ ಸಿಪಿಎಂ-ಡಿವೈಎಫ್‍ಐ ಕಾರ್ಯಕರ್ತರು ಪೋಲೀಸರ ಜತೆ ಸೇರಿ ಲಾಠಿ ಪ್ರಹಾರ ನಡೆಸಿದರು. ನವ ಕೇರಳ ಸಮಾವೇಶ ಆರಂಭವಾದ ನಂತರ ಮುಖ್ಯಮಂತ್ರಿಗಳ ಗನ್ ಮ್ಯಾನ್ ಟೀಕೆಗೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ಇಡುಕ್ಕಿಯಲ್ಲಿ ಮಾಧ್ಯಮ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿರುವುದಾಗಿಯೂ ದೂರಲಾಗಿತ್ತು.





