ತಿರುವನಂತಪುರಂ: ಕೊರೊನಾ ಹೊಸ ರೂಪಾಂತರದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಹೇಳಿದ್ದಾರೆ. ಆದರೆ ಜನರು ಜಾಗರೂಕರಾಗಿರಬೇಕು ಎಂದು ಸೂಚಿಸಿರುವರು.
ಹೊಸ ರೂಪಾಂತರವು ದೇಶದಲ್ಲಿ ಮೊದಲ ಬಾರಿಗೆ ಕೇರಳದಲ್ಲಿ ವರದಿಯಾಗಿದೆ. ಪ್ರಸ್ತುತ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದ್ದು, ಸಂಬಂಧಿತ ಕಾಯಿಲೆ ಇರುವವರು ಜಾಗರೂಕರಾಗಿರಬೇಕು ಎಂದು ಸಚಿವರು ಹೇಳಿರುವರು.
ಕರೋನಾ ರೂಪಾಂತರ ಬಿ.ಎ..2.86 ಅಥವಾ ಜೆ.ಎನ್.-1 ಸಹ-ವೇರಿಯಂಟ್ ಕೇರಳದ ವಿವಿಧ ಭಾಗಗಳಲ್ಲಿ ಕಂಡುಬಂದಿದೆ. ಇಂಡಿಯಾ ಸಾರ್ಸ್ ಸಿಒವಿ-2 ಜೀನೋಮಿಕ್ಸ್ ಕನ್ಸೋರ್ಟಿಯಂ ಕೇರಳದಲ್ಲಿ ಕರೋನದ ಹೊಸ ತಳಿಯ ಆವಿಷ್ಕಾರವನ್ನು ದೃಢಪಡಿಸಿದೆ. ಐಎನ್.ಎಸ್.ಎ.ಸಿ-ಒಜಿ ಸಾಂಕ್ರಾಮಿಕ ರೂಪಾಂತರಗಳ ಅನುಕ್ರಮ ಮತ್ತು ಕಣ್ಗಾವಲು ನಡೆಸುವ ದೇಶದ ಪ್ರಯೋಗಾಲಯ ಸಂಸ್ಥೆಯಾಗಿದೆ. ಇದು ವೇಗವಾಗಿ ಹರಡುತ್ತಿರುವ ವೈರಸ್ ಮತ್ತು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡಲಾಗುತ್ತಿದೆ ಎಂದು ಐಎನ್.ಎಸ್.ಎ.ಸಿ-ಒಜಿ ಹೇಳಿದೆ.
ಇಬ್ಬರು ಬಲಿ:
ಈ ಮಧ್ಯೆ ರಾಜ್ಯದಲ್ಲಿ ಕೊರೊನಾಗೆ ಇಬ್ಬರು ಸಾವನ್ನಪ್ಪಿದ್ದಾರೆ. ಕೋಝಿಕ್ಕೋಡ್ ಮತ್ತು ಕಣ್ಣೂರಿನಲ್ಲಿ ಕರೋನಾ ಸಾವುಗಳು ವರದಿಯಾಗಿವೆ.
ಮೃತರನ್ನು ಕೋಝಿಕ್ಕೋಡ್‍ನ ವಟೋಲಿ ನಿವಾಸಿ ಕುಮಾರನ್ (77) ಮತ್ತು ಕಣ್ಣೂರಿನ ಪನ್ನೂರಿನ ಅಬ್ದುಲ್ಲಾ (82) ಎಂದು ಗುರುತಿಸಲಾಗಿದೆ. ಮರಣೋತ್ತರ ಪರೀಕ್ಷೆಯಲ್ಲಿ ಇಬ್ಬರಿಗೂ ಕೊರೊನಾ ದೃಢಪಟ್ಟಿದೆ.
ಕುಮಾರನ್ ಆರೋಗ್ಯ ಸಮಸ್ಯೆಯಿಂದ ಕೋಝಿಕ್ಕೋಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವರದಿಯಾದ ಕೋವಿಡ್ ಸಾವುಗಳ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಜಾಗರೂಕರಾಗಿರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.





