ಕುಂಬಳೆ: ಬಸ್‍ನ ಸೀಸನ್ ವೆಚ್ಚವನ್ನು ಪಂಚಾಯತಿ ಭರಿಸುವುದರೊಂದಿಗೆ ಸಂಚಾರ ಮಾರ್ಗಗಳು ಮತ್ತು ಸಮಯ ಕ್ರಮವನ್ನು ಪಂಚಾಯತಿಯ ಸಲಹೆಯಂತೆ ಕೆ.ಎಸ್.ಆರ್.ಟಿ.ಸಿ ಆರಂಭಿಸಿರುವ 'ಗ್ರಾಮ ಬಂಡಿ' ಯಶಸ್ವಿಯಾಗಿ ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಸೇವೆಯನ್ನು ಯಶಸ್ವಿಯಾಗಿ ನಡೆಸುತ್ತಿದೆ.
2023-24ರ ಆರ್ಥಿಕ ವರ್ಷದ ಯೋಜನೆಯಲ್ಲಿ ಸೇರಿಸಿ ಕುಂಬಳೆ ಗ್ರಾ.ಪಂ. ಮತ್ತು ಕೆ.ಎಸ್.ಆರ್.ಟಿ.ಸಿ ಜಂಟಿಯಾಗಿ ನಡೆಸುವ ವಿಶಿಷ್ಟ ಯೋಜನೆಯೇ ಗ್ರಾಮಬಂಡಿ.
ಮೊದಲ ಗ್ರಾಮಬಂಡಿ:
ಅಕ್ಟೋಬರ್ 6 ರಂದು ರಾಜ್ಯ ಸಾರಿಗೆ ಸಚಿವ ಆಂಟೋನಿ ರಾಜು ಅವರು ಕಾಸರಗೋಡು ಜಿಲ್ಲೆಯ ಮೊದಲ ’ಗ್ರಾಮಬಂಡಿ’ಯನ್ನು ಕುಂಬಳೆ ಗ್ರಾಮ ಪಂಚಾಯತಿಯಲ್ಲಿ ಉದ್ಘಾಟಿಸಿದ್ದರು.
ಗ್ರಾಮಮಟ್ಟದ ಸಂಪರ್ಕ ಸೇತು:
ಗ್ರಾಮ ಬಂಡಿ. ಪ್ರಸ್ತುತ ಕುಂಬಳೆ ಗ್ರಾಮ ಪಂಚಾಯತಿನ ಬಸ್ ಸೌಕರ್ಯ ಇಲ್ಲದ ವ್ಯಾಪ್ತಿಗಳಲ್ಲಿ ಸೇವೆ ಸಲ್ಲಿಸುತ್ತಿದೆ. ಒಳನಾಡಿನ ಜನಸಾಮಾನ್ಯರಿಗೂ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆಲ್ಲರಿಗೂ ಗ್ರಾಮಬಂಡಿ ಬಂದ ಮೇಲೆ ಪ್ರಯಾಣದ ಸಮಸ್ಯೆ ನೀಗಿದೆ. ಪ್ರತಿ ದಿನ ನೂರಾರು ಜನರು ಗ್ರಾಮಬಂಡಿಯ ಸೇವೆಯನ್ನು ಪಡೆಯುತ್ತಿದ್ದಾರೆ.
ಜನಪರ ಬಂಡಿ: ವಿದ್ಯಾರ್ಥಿಗಳಿಗೆ ರೀಯಾಯ್ತಿ:
ಜಿಲ್ಲೆಯ ಪ್ರಥಮ ಗ್ರಾಮಬಂಡಿಯನ್ನು ಯಶಸ್ವಿಯಾಗಿ ನಡೆಸುತ್ತಿರುವುದು ಅತೀವ ಸಂತಸ ತಂದಿದೆ ಎಂದು ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷೆ ತಾಹಿರಾ ಯೂಸುಫ್ ಹೇಳಿದರು. ಪಂಚಾಯಿತಿ ವ್ಯಾಪ್ತಿಯ ಬಹುತೇಕ ವಾರ್ಡ್‍ಗಳಲ್ಲಿ ಗ್ರಾಮಬಂಡಿ ಹಾದು ಹೋಗುತ್ತಿದೆಯೆಂದು, ಶೀಘ್ರದಲ್ಲಿಯೇ ವಿದ್ಯಾರ್ಥಿಗಳ ರಿಯಾಯ್ತಿ ಜಾರಿಗೊಳಿಸಲಾಗುವುದೆಂದು ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಬ್ಬರಿಗೂ ಕೆ.ಎಸ್.ಆರ್.ಟಿ.ಸಿ ಸೇವೆ ಒದಗಿಸಲು ಪ್ರಯತ್ನಿಸಲಾಗುವುದು ಎಂದು ತಾಹಿರಾ ಯೂಸುಫ್ ಹೇಳಿದರು.
ಮೂರು ರೂಟುಗಳು:
ಪ್ರತಿದಿನ ಮೂರು ರೂಟುಗಳ ಮೂಲಕ ಕುಂಬಳೆ ಪಂಚಾಯತ್‍ನ ಗ್ರಾಮಬಂಡಿ ಸೇವೆ ನಡೆಸುತ್ತಿದೆ. ಪ್ರಸ್ತುತ ಕುಂಬಳೆ, ಆರಿಕ್ಕಾಡಿ, ಪಿ.ಕೆ.ನಗರ್, ಬಂಬ್ರಾಣ, ಚೂರಿತ್ತಡ್ಕ, ಕೊಡ್ಯಮೆ, ಪೂಕಟ್ಟೆ, ಬಾಯಿಕಟ್ಟೆ, ಉಳುವಾರ್, ಕಳತ್ತೂರು, ಪಾಂಬಾಡಿ, ಕಟ್ಟತ್ತಡ್ಕ, ನಾಯ್ಕಾಪು, ಮುಳಿಯಡ್ಕ, ಬದ್ರಿಯಾ ನಗರ್, ಪೇರಾಲ್ ಕಣ್ಣೂರು ಎಂಬೀ ಪ್ರದೇಶದಲ್ಲಿ ಗ್ರಾಮಬಂಡಿ ಸರ್ವೀಸ್ ನಡೆಸಲಾಗುತ್ತಿದೆ. ಕುಂಬಳೆ ಗ್ರಾ.ಪಂ.ನಲ್ಲಿ ಸ್ಥಳೀಯಾಡಳಿತ ಸಂಸ್ಥೆ ಹಾಗೂ ಕೇರಳ ಸ್ಟೇಟ್ ಟ್ರಾನ್ಸ್ ಪೋಟ್ರ್ಸ್ ಕಾರ್ಪೋರೇಷನ್ ಜಂಟಿಯಾಗಿ ಒಳನಾಡಿನ ಪ್ರಯಾಣ ಸಮಸ್ಯೆ ಪರಿಹರಿಸುವ ಉದ್ದೇಶದಿಂದ ತಂದಿರುವ ಗ್ರಾಮಬಂಡಿ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದ್ದು, ಜಿಲ್ಲೆಯ ವಿವಿಧ ಪಂಚಾಯಿತಿಗಳು ಕೆ.ಎಸ್.ಆರ್.ಟಿ.ಸಿಯಲ್ಲಿ ಗ್ರಾಮಬಂಡಿಗೆ ಮನವಿ ಮಾಡುತ್ತಿದ್ದಾರೆ.




.jpg)
