HEALTH TIPS

ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನ ಸಂಪನ್ನ

           ಮಂಜೇಶ್ವರ: ಕನ್ನಡ ನಾಡು ನುಡಿ ,ಭಾμÉ ,ಸಂಸ್ಕøತಿಯ ರಕ್ಷಣೆಗೆ ನಾವೆಲ್ಲ  ಕೈಜೋಡಿಸಬೇಕಾಗಿದೆ. ಅಧ್ಯಾಪಕರಿಗೆ ಸಮಾಜದಲ್ಲಿ ಉನ್ನತ ಸ್ಥಾನಮಾನ ಇದೆ. ಅರ್ಪಣಾ ಮನೋಭಾವದಿಂದ ಕರ್ತವ್ಯ ನಿರ್ವಹಿಸಿದರೆ ಮಾತ್ರ ಮಕ್ಕಳ ಭವಿಷ್ಯವು ಬೆಳಗವುದು. ಇಲ್ಲಿನ ಶಿಕ್ಷಕರು ಹಲವಾರು ಸವಾಲುಗಳನ್ನ ಎದುರಿಸುತ್ತಿದ್ದಾರೆ  ಎಂದು ನಿವೃತ್ತ ಪ್ರಾಧ್ಯಾಪಕಿ,ಲೇಖಕಿ ಡಾ. ಮಹೇಶ್ವರಿ ಯು. ಅವರು ತಿಳಿಸಿದರು.

       ಕೇರಳ ಪ್ರಾಂತ್ಯ ಕನ್ನಡ ಮಾಧ್ಯಮ ಅಧ್ಯಾಪಕರ ಸಂಘದ ಮಂಜೇಶ್ವರ ಉಪಜಿಲ್ಲಾ ಸಮ್ಮೇಳನವನ್ನ ಉದ್ಘಾಟಿಸಿ ಮಾತನಾಡಿದರು.


         ಸಂಘಟನೆಯ ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಉಮೇಶ ಕೆ. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು. ಇವರು ಧ್ವಜಾರೋಹಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಜಿಲ್ಲಾ ಶಿಕ್ಷಣಾಧಿಕಾರಿ ದಿನೇಶ ವಿ. ಮತ್ತು  ಸಂತ ಅಲೋಶಿಯಸ್ ಕಾಲೇಜು ಮಂಗಳೂರು ಇದರ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಮಹಾಲಿಂಗ ಭಟ್ ಕೆ. ಮುಖ್ಯ ಅಥಿತಿಗಳಾಗಿ ಉಪಸ್ಥಿತರಿದ್ದರು. 

   ಸಂಘಟನೆಯ ಕೇಂದ್ರ ಸಮಿತಿಯ ಅಧ್ಯಕ್ಷ ಶ್ರೀನಿವಾಸರಾವ್ ಪಿ.ಬಿ.  ಪ್ರಾಸ್ತಾವಿಕವಾಗಿ ಮಾತನಾಡಿ ಸಂಘಟನೆಯ ಹುಟ್ಟು ಹಾಗೂ ಸಂಘಟನೆ ನಡೆದು ಬಂದ ಹಾಗೂ ಎದುರಿಸಿದ ಸಮಸ್ಯೆಗಳು ಹಾಗೂ ಗಳಿಸಿದಂತಹ ಸಾಧನೆಯನ್ನು ಹೇಳುತ್ತಾ ಸಕ್ರಿಯವಾಗಿ ಕೆಲಸ ಕಾರ್ಯಗಳನ್ನು ನಡೆಸುತ್ತಾ ಹಲವಾರು ಕನ್ನಡಪರ ಹೋರಾಟಗಳನ್ನು ಮಾಡಿದುದರ ಬಗ್ಗೆ ತಿಳಿಸಿದರು. ಹಾಗೂ ಕನ್ನಡಕ್ಕೆ ಚ್ಯುತಿ ಬಂದಾಗ ಧ್ವನಿಯೆತ್ತಿ  ಮಾಡಿದ ಸಾಧನೆಗಳನ್ನು ವಿವರಿಸಿದರು. ಇದೇ ಸಂದರ್ಭದಲ್ಲಿ ಕಾಸರಗೋಡು ಜಿಲ್ಲಾ ಶಿಕ್ಷಣಾಧಿಕಾರಿಯಾಗಿ ಭಡ್ತಿ ಹೋದಿದ ದಿನೇಶ ವಿ. ರವರನ್ನು ಸಂಘಟನೆಯ ವತಿಯಿಂದ ಗೌರವಿಸಲಾಯಿತು.  ಜೊತೆಗೆ ಜಿ.ವಿ.ಎಚ್.ಎಸ್. ಎಸ್.  ಕುಂಜತ್ತೂರು ಶಾಲೆಯ ಶಿಕ್ಷಕರಾದ ದಿವಾಕರ್ ಬಲ್ಲಾಳ್ ರವರ 'ಸವೆದ ಹಾದಿಯ ಪಯಣ' ಎಂಬ ಕೃತಿ ಬಿಡುಗಡೆಗೊಂಡಿತು. ಡಾ.ಮಹಾಲಿಂಗ ಭಟ್ ಕೃತಿ ಪರಿಚಯ ನೀಡಿದರು. 


         ಮಂಜೇಶ್ವರದ ಪ್ರಭಾರ ವಿದ್ಯಾಧಿಕಾರಿಗಳಾದ ಜಿತೇಂದ್ರ ಎಸ್.ಎಚ್, ಮಂಜೇಶ್ವರ ಬಿ.ಆರ್.ಸಿ ಯ ಬ್ಲೋಕ್ ಪೆÇ್ರೀಗ್ರಾಂ ಕೋರ್ಡಿನೇಟರ್ ವಿಜಯಕುಮಾರ್, ಕುಂಜತ್ತೂರು ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ಬಾಲಕೃಷ್ಣ ಗುಣಾಜೆ, ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಯಪ್ರಶಾಂತ್ ಪಾಲೆಂಗ್ರಿ,  ಖಜಾಂಜಿ ಪದ್ಮಾವತಿ ಎಂ ಹಾಗೂ ಉಪಾಧ್ಯಕ್ಷರಾದ  ಶ್ರೀ ಸುಕೇಶ್ ಎ ಉಪಸ್ಥಿತರಿದ್ದು ಶುಭ ಹಾರೈಸಿದರು. ಮಂಜೇಶ್ವರ ಸಮಿತಿಯ ಕಾರ್ಯದರ್ಶಿಯಾದ ಕವಿತಾ ಕೂಡ್ಲು ಸ್ವಾಗತಿಸಿ, ಖಜಾಂಜಿ  ಜೀವನ್ ಕುಮಾರ್ ವಂದಿಸಿದರು. ಸದಸ್ಯರಾದ ಜಬ್ಬಾರ್ ಬಿ ಕಾರ್ಯಕ್ರಮ ನಿರೂಪಿಸಿದರು.

          ಬಳಿಕ ನಡೆದ ಪ್ರತಿನಿಧಿ ಸಮ್ಮೇಳನದಲ್ಲಿ ಉಪಜಿಲ್ಲಾ ಘಟಕದ ಅಧ್ಯಕ್ಷರಾದ ಉಮೇಶ್ ಕೆ ಅಧ್ಯಕ್ಷತೆ ವಹಿಸಿದ್ದರು. ಸಂಘಟನಾತ್ಮಕ ಚರ್ಚೆಯು ನಡೆಯಿತು. ವಾರ್ಷಿಕ ವರದಿ ಮಂಡನೆಯನ್ನು ಕಾರ್ಯದರ್ಶಿಯಾದ ಕವಿತಾ ಕೂಡ್ಲು ಹಾಗೂ ಲೆಕ್ಕಪತ್ರ ಮಂಡನೆಯನ್ನು ಖಜಾಂಜಿ  ಜೀವನ್ ಕುಮಾರ್ ರವರು ಮಂಡಿಸಿದರು. ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. ಪ್ಯಾನಲ್ ಮಂಡನೆಯನ್ನು ಕೇಂದ್ರ ಸಮಿತಿಯ ಸದಸ್ಯರಾದ ಅಶೋಕ್ ಕುಮಾರ್ ನೆರವೇರಿಸಿಕೊಟ್ಟರು. ಅಧ್ಯಕ್ಷರಾಗಿ ಎ.ಎಲ್.ಪಿ. ಶಾಲೆ ಇಚ್ಲಂಗೋಡು ಶಾಲೆಯ ಮುಖ್ಯ ಶಿಕ್ಷಕ ಜಯರಾಮ ಚೆಕ್ಕೆ, ಕಾರ್ಯದರ್ಶಿಯಾಗಿ ಎ.ಯು.ಪಿ. ಶಾಲೆ ಆನೆಕಲ್ಲಿನ ಜೀವನ್ ಕುಮಾರ್, ಕೋಶಾಧಿಕಾರಿಯಾಗಿ ಎಸ್.ಡಿ.ಪಿ.ಎ.ಯು.ಪಿ. ಶಾಲೆ ಸಜಂಕಿಲದ ಶ್ರೀರಾಮ ಕೆದುಕೋಡಿ ಅವಿರೋಧವಾಗಿ ಆಯ್ಕೆಯಾದರು.


        ಅಪರಾಹ್ನ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಹುಲಿ ವೇಷ ಕುಣಿತ  ಸ್ಪರ್ಧೆ ಬಹಳ ಸೊಗಸಾಗಿ ನಡೆಯಿತು. ಹಲವು ತಂಡಗಳು ಇದರಲ್ಲಿ ಭಾಗವಹಿಸಿದ್ದರು. ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು. ಸಂಘಟನೆಯ ಪದಾಧಿಕಾರಿಗಳು ಉಪಸ್ಥಿತರಿದ್ದು ಸಹಕರಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries