ಮಂಜೇಶ್ವರ: ಹದಿನೆಂಟು ಪೇಟೆಗಳ ದೇವಸ್ಥಾನವೆಂದೇ ಖ್ಯಾತವಾದ ಮಂಜೇಶ್ವರದ ಶ್ರೀಮದ್ ಅನಂತೇಶ್ವರ ದೇವಾಲಯದಲ್ಲಿ ವಾರ್ಷಿಕ ಷಷ್ಠೀ ಮಹೋತ್ಸವ ಆರಂಭಗೊಂಡಿದ್ದು ವಿವಿಧ ವಿಧಿವಿಧಾನಗಳೊಂದಿಗೆ ಭಜಕರನ್ನು ಆಕರ್ಷಿಸುತ್ತಿದೆ.
ಡಿ.13 ರಿಂದ ವಿವಿಧ ವಿಧಿವಿಧಾನಗಳು ದೇವಾಲಯದಲ್ಲಿ ನಡೆಯುತ್ತಿದ್ದು, ಡಿ.18 ರಂದು ಸೋಮವಾರ ಷಷ್ಠೀ ಉತ್ಸವ ನಡೆಯಲಿದೆ.ಅಂದು ಬೆಳಿಗ್ಗೆ 10 ರಿಂದ 12ರ ವರೆಗೆ ಧರ್ಮ, 12.30ಕ್ಕೆ ಮಹಾಪೂಜೆ, 1 ಕ್ಕೆ ಯಜ್ಞ, ಅಪರಾಹ್ನ 3.30 ಕ್ಕೆ ಪೂರ್ಣಾಹುತಿ, 4 ಕ್ಕೆ ಯಜ್ಞಾರತಿ, ಸ್ವರ್ಣ ವಾಹನದಲ್ಲಿ ಬಲಿ ಉತ್ಸವ, ರಥಾರೋಹಣ ನಡೆಯಲಿದೆ. ಮಂಗಳವಾರ ಮಧ್ಯಾಹ್ನ 1.30 ಕ್ಕೆ ಅವಭೃತ, 2.30 ರಿಂದ ಮರದ ಲಾಲ್ಕಿ ಸಣ್ಣ ರಥೋತ್ಸವ, ಸಂಜೆ 5 ಕ್ಕೆ ಶೇಷತೀರ್ಥ ಸ್ನಾನ, 6 ಕ್ಕೆ ಧ್ವಜಾವರೋಹಣ, 7 ಕ್ಕೆ ಗಡಿ ಪ್ರಸಾದ ವಿತರಣೆಯೊಂದಿಗೆ ಉತ್ಸವ ಸಮಾರೋಪಗೊಳ್ಳಲಿದೆ.
ಶನಿವಾರ ಬೆಳಿಗ್ಗೆ 9 ಕ್ಕೆ ಬೆಳ್ಳಿ ಲಾಲ್ಕಿ ಹಗಲು ಉತ್ಸವ, 1 ಕ್ಕೆ ಯಜ್ಞ, ಯಜ್ಞಾರತಿ,ಬಲಿ, ಸಮಾರಾಧನೆಗಳು ನಡೆಯಿತು. ಇಂದು (ಭಾನುವಾರ) ಬೆಳಿಗ್ಗೆ 9.30 ಕ್ಕೆ ಸ್ವರ್ಣಲಾಲ್ಕಿ ಹಗಲು ಉತ್ಸವ, ಮಧ್ಯಾಹ್ನ 12 ಕ್ಕೆ ಪ್ರಾರ್ಥನೆ, ಅಭಿಷೇಕ, ತುಲಾಭಾರ, ಮಹಾಪೂಜೆ, ಸಂಜೆ 5.30 ಕ್ಕೆ ದೇವ ದರ್ಶನದ ಪ್ರಾರ್ಥನೆ, 6 ಕ್ಕೆ ಯಜ್ಞ ನಡೆಯಿತು




.jpg)
.jpg)
.jpg)
.jpg)
.jpg)
