ನವದೆಹಲಿ: ವಿಶ್ವವಿದ್ಯಾನಿಲಯಗಳಿಗೆ ಪ್ರವೇಶಿಸಲು ಬಿಡುವುದಿಲ್ಲ ಎಂಬ ಎಸ್‍ಎಫ್‍ಐ ಸವಾಲನ್ನು ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಸ್ವೀಕರಿಸಿದ್ದಾರೆ.
ಎಸ್‍ಎಫ್‍ಐ ಕಾರ್ಯಕರ್ತರು ಗೂಂಡಾಗಳು ಎಂದು ರಾಜ್ಯಪಾಲರು ಪುನರುಚ್ಚರಿಸಿದ್ದಾರೆ. ಪ್ರತಿಭಟನಾಕಾರರು ಕಾರಿನ ಬಳಿ ಬಂದರೆ ಇನ್ನು ಗತಿಕಾಣಿಸಲಾಗುವುದು. ಗೂಂಡಾಗಳು ಮತ್ತು ಸಮಾಜ ವಿರೋಧಿಗಳೊಂದಿಗೆ ಯಾವುದೇ ಕದನ ವಿರಾಮವಿಲ್ಲ ಎಂದು ಅವರು ನೇರವಾಗಿ ಹೇಳಿದರು. ದೂರದಿಂದಲೇ ಕಪ್ಪು ಬಾವುಟ ತೋರಿಸಿದರೂ ತೊಂದರೆ ಇಲ್ಲ, ದಾರಿಯಲ್ಲಿ ಪ್ರತಿಭಟನೆ ನಡೆಸಿದರೆ ಕಾರಿನಿಂದಿಳಿದು ಪ್ರತಿಕ್ರಿಯೆ ನೀಡುವುದಾಗಿ ತಿಳಿಸಿದರು.
ಕುಲಪತಿಗಳೂ ಆಗಿರುವ ರಾಜ್ಯಪಾಲರು ಕ್ಯಾಲಿಕಟ್ ವಿಶ್ವವಿದ್ಯಾಲಯಕ್ಕೆ ಆಗಮಿಸಲಿದ್ದಾರೆ. ಆವರಣದಲ್ಲಿ ಸೋಮವಾರ ನಡೆಯುವ ವಿಚಾರ ಸಂಕಿರಣದಲ್ಲಿ ಭಾಗವಹಿಸುವರು. ರಾಜ್ಯಪಾಲರಿಗೆ ಕ್ಯಾಂಪಸ್‍ಗೆ ಕಾಲಿಡಲು ಬಿಡುವುದಿಲ್ಲ ಎಂಬುದು ಎಸ್‍ಎಫ್‍ಐ ಸವಾಲಾಗಿತ್ತು. ಈ ಸವಾಲನ್ನು ಸ್ವೀಕರಿಸಿದ ರಾಜ್ಯಪಾಲರು ವಿಶ್ವವಿದ್ಯಾಲಯದ ಅತಿಥಿ ಗೃಹದಲ್ಲಿಯೇ ಉಳಿಯಲು ನಿರ್ಧರಿಸಿದ್ದಾರೆ.
ನಿನ್ನೆ ರಾತ್ರಿ ಎಸ್‍ಎಫ್‍ಐ ಕಾರ್ಯಕರ್ತರು ರಾಜ್ಯಪಾಲರಿಗೆ ಕಪ್ಪು ಬಾವುಟ ಪ್ರದರ್ಶಿಸಿದರು. ಎಸ್‍ಎಫ್‍ಐ ಜಿಲ್ಲಾ ಸಮಿತಿ ನೇತೃತ್ವದಲ್ಲಿ ರಾಜ್ಯಪಾಲರ ಮೇಲೆ ಹಲ್ಲೆ ಯತ್ನ ನಡೆದಿತ್ತು. ಬಳಿಕ ರಾಜ್ಯಪಾಲರು ಕಾರಿನಿಂದ ಇಳಿದು ಆಕ್ರೋಶ ವ್ಯಕ್ತಪಡಿಸಿದ್ದರು. ರಾಜ್ಯಪಾಲರ ಕಾರಿನ ಮೇಲೆ ಹಾನಿಗೊಳಿಸಿದ ಕಾರ್ಯಕರ್ತರ ಮೇಲೆ ತುಲನಾತ್ಮಕವಾಗಿ ದುರ್ಬಲ ವಿಭಾಗಗಳಡಿ ಆರಂಭದಲ್ಲಿ ಎಫ್‍ಐಆರ್ ದಾಖಲಿಸಲಾಯಿತು. ಇದರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ನಂತರ ಹೆಚ್ಚಿನ ಸೆಕ್ಷನ್‍ಗಳನ್ನು ವಿಧಿಸಲಾಯಿತು. ಬಳಿಕ ಕಾರ್ಯಕರ್ತರ ವಿರುದ್ಧ ಐಪಿಸಿ 124ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.





