HEALTH TIPS

ತ್ಯಾಜ್ಯ ನಿರ್ವಹಣೆ ನಿಜವಾದ ಸಂಸ್ಕøತಿಯನ್ನು ಪ್ರತಿಬಿಂಬಿಸುತ್ತದೆ: ಡಾ. ಜಾಯ್ ಇಲಾಮನ್

                   ಕಾಸರಗೋಡು: ತ್ಯಾಜ್ಯ ನಿರ್ವಹಣೆಯಲ್ಲಿನ ಬದಲಾವಣೆ ನಿಜವಾದ ಸಂಸ್ಕೃತಿಯ ಪ್ರತಿಬಿಂಬವಾಗಿದೆ. ಜಾಗತಿಕ ಮಟ್ಟದಲ್ಲಿ ಇಂದೀಗ ಈ ಜಾಗೃತಿ ಹೆಚ್ಚು ಪ್ರತಿಫಲನಗೊಳ್ಳುತ್ತಿದೆ ಎಂದು ಕಿಲದ ಮಹಾನಿರ್ದೇಶಕ (ಕೇರಳ ಸ್ಥಳೀಯ ಆಡಳಿತ ಸಂಸ್ಥೆ)ಡಾ.  ಜಾಯ್ ಇಲಮನ್ ಹೇಳಿದರು. 

               ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ ಅಂಗವಾಗಿ ನಿನ್ನೆ ನಡೆದ ಸಾಂಸ್ಕೃತಿಕ ರಾತ್ರಿಯಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

          ತ್ಯಾಜ್ಯ ನಿರ್ವಹಣೆ ಕ್ಷೇತ್ರದಲ್ಲಿ ರಾಜ್ಯ ಸರ್ಕಾರ ಅಳವಡಿಸಿಕೊಂಡಿರುವ ವಿನೂತನ ಮಧ್ಯಸ್ಥಿಕೆಗಳು ಪ್ರಮುಖ ಬದಲಾವಣೆಗಳನ್ನು ಸೃಷ್ಟಿಸಿವೆ. ತ್ಯಾಜ್ಯ ನಿರ್ವಹಣೆಗೆ ಹಸಿರು ಕ್ರಿಯಾಸೇನೆ  ಮುಂಚೂಣಿ ಹೋರಾಟಗಾರರಾಗಿ ಹೊರಹೊಮ್ಮಿದೆ ಎಂದರು. ರಾಜ್ಯದಲ್ಲಿ ಎಲ್ಲರನ್ನೂ ಒಳಗೊಳ್ಳುವ ಅಭಿವೃದ್ಧಿ ನಡೆಯುತ್ತಿದೆ. 0.73ರಷ್ಟಿರುವ ಅತ್ಯಂತ ಬಡವರು ಎಂದು ಗುರುತಿಸಿರುವ ವರ್ಗವನ್ನು ಮೇಲೆತ್ತಲು ಸರ್ಕಾರ ಕ್ರಮಕೈಗೊಳ್ಳುತ್ತಿದೆ. ಡಾ. ಜಾಯ್ ಇಲಮನ್ ಹೇಳಿದರು.

                ಕಣ್ಣೂರು ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಕೆ.ಸುರೇಶ್ ಬಾಬು ಮುಖ್ಯ ಭಾಷಣ ಮಾಡಿದರು. ಕಲೆ, ಜನ, ಅರಬ್ಬೀ ಸಮುದ್ರದ ಸಂಗಮವೇ ಬೇಕಲ ಎಂದು ಹೇಳಿದರು.

             ದೇಲಂಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಎ.ಪಿ.ಉಷಾ ಅಧ್ಯಕ್ಷತೆ ವಹಿಸಿದ್ದರು. ಅಜಾನೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಟಿ.ಶೋಭಾ ಭಾಗವಹಿಸಿದ್ದರು. ಡಾ. ಜಾಯ್ ಇಳಮಣ್ಣವರ ಮತ್ತು ವಿ.ಕೆ.ಸುರೇಶ್ ಬಾಬು ಅವರನ್ನು ಉಡುಗೊರೆಗಳನ್ನು ಸಂಘಟನಾ ಸಮಿತಿ ಅಧ್ಯಕ್ಷ, ಶಾಸಕ ಸಿ.ಎಚ್.ಕುಂಞಂಬು ಮತ್ತು ಕಾಞಂಗಾಡ್ ಬ್ಲಾಕ್ ಪಂಚಾಯತ್ ಅಧ್ಯಕ್ಷ ಕೆ.ಮಣಿಕಂಠನ್ ನೀಡಿ ಗೌರವಿಸಿದರು. ವಸತಿ ವಿಶ್ರಾಂತಿ ಉಪಸಮಿತಿ ಅಧ್ಯಕ್ಷ ವಿ. ರಾಜನ್ ಸ್ವಾಗತಿಸಿ, ಅಲಂಕಾರ ಉಪಸಮಿತಿಯ ಅಧ್ಯಕ್ಷ ಮುಹಮ್ಮದ್ ಕುಂಞÂ್ಞ ಚೋನೈ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries