ಕಾಸರಗೋಡು: ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ ಕಾಸರಗೋಡಿನ 2023-24ನೇಸಾಲಿನ ವಿದ್ಯಾರ್ಥಿ ಪೆÇಲೀಸ್ ಪಾಸಿಂಗ್ ಔಟ್ ಪರೇಡ್ ಶಾಲಾ ಮೈದಾನದಲ್ಲಿ ನಡೆಸಿತು. ನಗರಠಾಣೆ ಪೆÇಲೀಸ್ ನಿರೀಕ್ಷಕ ಪಿ.ಅಜಿತಕುಮಾರ್ ಗೌರವ ವಂದನೆ ಸ್ವೀಕರಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಬದ್ಧತೆ ಕಾಪಾಡುವುದರ ಜತೆಗೆ ಆರೋಗ್ಯ ಕಾಪಾಡುವಲ್ಲಿ ಸ್ಟೂಡೆಂಟ್ ಪೊಲಿಸ್ ಕೋರ್(ಎಸ್ಪಿಸಿ)ಮಹತ್ವದ ಪಾತ್ರ ವಹಿಸುತ್ತಿದೆ.
ಎಸ್‍ಪಿಸಿ ಭಾವೀ ಜನಾಂಗಕ್ಕೆ ಮಾದರಿಯಾಗಿರುವುದಾಗಿ ತಿಳಿಸಿದರು. ನಗರಸಭೆ ಅಧ್ಯಕ್ಷ, ವಕೀಲ ಪಿ. ಎಂ. ಮುನೀರ್, ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ಬಾಸ್ ಬೇಗಂ, ಪಿಟಿಎ ಅಧ್ಯಕ್ಷ ಅಬೂಬಕರ್ ತುರುತ್ತಿ, ಶಾಲಾ ಮುಖ್ಯ ಶಿಕ್ಷಕಿ ಎಂ. ಎ. ಉಷಾ, ಎಸ್‍ಪಿಸಿ ಡ್ರಿಲ್ಲಿಂಗ್ ಇನ್‍ಸ್ಪೆಕ್ಟರ್ ಎ. ಅಭಿಲಾಷ್, ಸಹಾಯಕ ಡ್ರಿಲ್ಲಿಂಗ್ ಇನ್ಸ್ ಪೆಕ್ಟರ್ ಸಿ. ಸೋನಿಯಾ, ಎಸ್‍ಪಿಸಿ-ಸಿಪಿಓಪಿ ಸಂಧ್ಯಾ ಕುಮಾರಿ, ಎಸಿಪಿಒ ಮಧು ಪ್ರಶಾಂತ್, ಪೆÇೀಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

