ಕಾಸರಗೋಡು: ಬೇಕಲ ಅಂತಾರಾಷ್ಟ್ರೀಯ ಬೀಚ್ ಉತ್ಸವಕ್ಕೆ ಇನ್ನು ಹತ್ತು ದಿನಗಳು ಮಾತ್ರ ಬಾಕಿ ಉಳಿದಿವೆ. ರೆಡ್ ಮೂನ್ ಬೀಚ್ ಪಾರ್ಕ್‍ನಲ್ಲಿ ಬೀಚ್‍ಉತ್ಸವದ್ ಎರಡನೇ ಹಂತಕ್ಕಾಗಿ ಪ್ರವಾಸಿಗರನ್ನು ಸ್ವಾಗತಿಸಲು ಸಿದ್ಧತೆ ನಡೆಸುತ್ತಿದೆ. ಈ ಬಾರಿ ಬೇಕಲ್ ಬೀಚ್ ಪಾರ್ಕ್ ಮತ್ತು ರೆಡ್ ಮೂನ್ ಬೀಚ್ ಪಾರ್ಕ್‍ನಲ್ಲಿ ಬೀಚ್ ಉತ್ಸವಕ್ಕೆ ಆಗಮಿಸುವ ಪ್ರವಾಸಿಗರಿಗೆ ಪ್ರವೇಶಿಸಲು ಐದು ಹಾದಿಗಳನ್ನು ನಿರ್ಮಿಸಲಾಗಿದೆ.
ಪ್ರತಿ ಪ್ರವೇಶ ದ್ವಾರದಲ್ಲಿ ಟಿಕೆಟ್ ಖರೀದಿಸುವ ಸೌಲಭ್ಯವೂ ಇರಲಿದೆ. ಈ ಬಾರಿ ಹೆಚ್ಚಿನ ಜನಸಂದಣಿಯನ್ನು ಪರಿಗಣಿಸಿ, ರೆಡ್ ಮೂನ್ ಬೀಚ್ ಪ್ರವಾಸಿಗರಿಗೆ ಹೊಸ ಅಮ್ಯೂಸ್ಮೆಂಟ್ ರೈಡ್‍ಗಳು ಮತ್ತು ವಿವಿಧ ಆಹಾರ ಮಳಿಗೆಗಳನ್ನು ಸಹ ಸಿದ್ಧಪಡಿಸುತ್ತಿರುವುದಾಗಿ ಸ್ವಾಗತ ಸಮಿತಿ ಪದಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಸಕ್ತ ಬಿ.ಆರ್.ಡಿ.ಸಿಯಲ್ಲಿ ಮಕ್ಕಳ ಪಾರ್ಕ್, ಅಮ್ಯೂಸ್ಮೆಂಟ್ ರೈಡ್, ಸ್ಪೀಡ್ ಬೋಟ್, ಜಸ್ಕಿ ಮುಂತಾದ ಜಲ ಕ್ರೀಡೆಗಳಿವೆ. ಡಿ. ಸಿ ರೆಡ್ ಮೂನ್ ಬೀಚ್ ಪಾರ್ಕ್ ಕಾರ್ಯನಿರ್ವಹಿಸುತ್ತಿದೆ. ಹತ್ತು ದಿವಸಗಳ ಕಾಲ ನಡೆಯುವ ಬೀಚ್ ಫೆಸ್ಟ್‍ನ ಅಂಗವಾಗಿ ಆಹಾರ ಮಳಿಗೆಗಳು ಮತ್ತು ಇತರ ಉತ್ಪನ್ನಗಳ ಮಳಿಗೆಗಳು ಕಾರ್ಯಾಚರಿಸಲಿದೆ. ಸ್ಟಾಲ್ ಬೇಕಾದವರು ರೆಡ್ ಮೂನ್ ಬೀಚ್ ಕಚೇರಿಯನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.


