ಕಾಸರಗೋಡು: ಪಳ್ಳಿಕ್ಕೆರೆ ಗ್ರಾಮ ಪಂಚಾಯಿತಿಯ 22ನೇ ವಆರ್ಡು ಕೋಟ್ಟಂಕುನ್ನಿನಲ್ಲಿ ನಡೆದ ಉಪ ಚುನಾವಣೆಯಲ್ಲಿ ಇಂಡಿಯನ್ ಯೂನಿಯನ್ ಮುಸ್ಲಿಂಲೀಗಿನ ಅಬ್ದುಲ್ಲಾ ಸಿಂಗಾಪುರ 117 ಮತಗಳಿಂದ ಜಯಗಳಿಸಿದ್ದಾರೆ.
ಅಬ್ದುಲ್ಲಾ ಸಿಂಗಾಪುರ 453, ಸಿಪಿಎಂನ ಎಂ.ಎಚ್.ಹ್ಯಾರಿಸ್ 336 ಹಾಗೂ ಬಿಜೆಪಿಯ ಎಂ.ಪ್ರದೀಪ್ 102 ಮತಗಳನ್ನು ಪಡೆದುಕೊಮಡಿದ್ದಾರೆ. ಡಿಸೆಂಬರ್ 12 ರಂದು ನಡೆದ ಚುನಾವಣೆಯಲ್ಲಿ ಶೇ68.12 ರಷ್ಟು ಮತದಾನ ದಾಖಲಾಗಿದೆ. 358 ಪುರುಷರು ಮತ್ತು 533 ಮಹಿಳೆಯರು ಸೇರಿದಂತೆ 891 ಜನರು ತಮ್ಮ ಮತಗಳನ್ನು ಚಲಾಯಿಸಿದ್ದರು. ವಾರ್ಡ್‍ನಲ್ಲಿ 624 ಪುರುಷರು, 684 ಮಹಿಳೆಯರು ಸೇರಿ 1038 ಮತದಾರರಿದ್ದಾರೆ.




