HEALTH TIPS

ಕುಮಳಿ ಚೆಕ್ ಪೋಸ್ಟ್ ನಲ್ಲಿ ವಿಜಿಲೆನ್ಸ್ ತಪಾಸಣೆ; ಲಂಚದ ಹಣ ವಶ

                    ಇಡುಕ್ಕಿ: ಕುಮಳಿ ಚೆಕ್ ಪೋಸ್ಟ್ ನಲ್ಲಿ ವಿಜಿಲೆನ್ಸ್ ಅಧಿಕಾರಿಗಳು ನಡೆಸಿದ ಮಿಂಚಿನ ತಪಾಸಣೆಯಲ್ಲಿ ವ್ಯಾಪಕ ಅವ್ಯವಹಾರ ಹಾಗೂ ಅಕ್ರಮವಾಗಿ ಹಣ ಇಟ್ಟಿರುವುದು ಪತ್ತೆಯಾಗಿದೆ.

                   ಗಡಿಭಾಗದಲ್ಲಿರುವ ಮೋಟಾರು ವಾಹನ ಇಲಾಖೆಯ ಚೆಕ್ ಪೋಸ್ಟ್ ನಲ್ಲಿ ವಿಜಿಲೆನ್ಸ್ ತಪಾಸಣೆ ನಡೆಸಲಾಯಿತು. ಅಧಿಕಾರಿಗಳು ನೆರೆ ರಾಜ್ಯಗಳಿಂದ ಬರುವ ವಾಹನಗಳಿಂದ ಅಕ್ರಮ ಹಣ ಪಡೆಯುತ್ತಿದ್ದಾರೆ ಎಂಬ ಮಾಹಿತಿ ಆಧರಿಸಿ ತನಿಖೆ ನಡೆಸಲಾಗಿತ್ತು.

                ಕಚೇರಿ ಸಂಕೀರ್ಣದ ವಿವಿಧೆಡೆ ಹಾಗೂ ಕಟ್ಟಡದಲ್ಲಿ ಬಚ್ಚಿಟ್ಟಿದ್ದ ಪ್ರಿಂಟರ್ ನಿಂದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. 8000ಕ್ಕೂ ಹೆಚ್ಚು ಹಣ ಪತ್ತೆಯಾಗಿದೆ. ಶಬರಿಮಲೆ ಸೀಸನ್ ನಲ್ಲಿ ವಾಹನ ದಟ್ಟಣೆ ಹೆಚ್ಚುತ್ತಿದ್ದು, ಚೆಕ್ ಪೋಸ್ಟ್ ಗಳಲ್ಲಿ ವ್ಯಾಪಕ ಅಕ್ರಮಗಳು ನಡೆಯುತ್ತಿವೆ.

                 ತಪಾಸಣೆ ವೇಳೆ ಅಧಿಕಾರಿಗಳು ಆನ್‍ಲೈನ್ ಪರ್ಮಿಟ್ ತೆಗೆದುಕೊಂಡ ನೆರೆ ರಾಜ್ಯಗಳ ವಾಹನಗಳಿಂದ ಹಣ ಪಡೆದಿರುವುದು ಪತ್ತೆಯಾಗಿದೆ. ಮೋಟಾರು ವಾಹನ ಇಲಾಖೆ ಅಧಿಕಾರಿಗಳು ಲಂಚ ಪಡೆದಿರುವುದನ್ನು ಪತ್ತೆಹಚ್ಚಲಾಗಿದೆ. 

          ವಾಹನದಲ್ಲಿ ವೇಶಮರೆಸಿ ವಿಜಿಲೆನ್ಸ್ ಸಿಬ್ಬಂದಿಗಳು ಆಗಮಿಸಿ ಕಾರ್ಯಾಚರಣೆ ನಡೆಸಿದರು. ಇದರೊಂದಿಗೆ ವಿಜಿಲೆನ್ಸ್ ಚೆಕ್ ಪೋಸ್ಟ್ ಹಾಗೂ ಕಚೇರಿ ಸಂಕೀರ್ಣದಲ್ಲಿ ಮಿಂಚಿನ ದಾಳಿ ನಡೆಸಲಾಯಿತು.



Post a Comment

0 Comments
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














https://blogger.googleusercontent.com/img/b/R29vZ2xl/AVvXsEiDSnXRg29C8xRrYlj8CXm6O4l2UdEq9AkXmnHj8_wZUI5vwXlgdUlkI9NKpNnmUcuyvxBBTZpDZLd6zBDp4lpzuhrcBD3E1kc_Ue2fHWAon6DxsQbBDYIbBWFEdFMkDm8b2BrDGeFAeqUfxis-yOttEwjv85p8aI2cORmg7vxT4p1YoMFWHFDw9vMl/w640-h362/IMG-20230524-WA0250.jpg
Qries