ತಿರುವನಂತಪುರ: ಕೋಝಿಕ್ಕೋಡ್-ಪಾಲಕಾಡ್ ರಾಷ್ಟ್ರೀಯ ಹೆದ್ದಾರಿಯ ನಟುಕಲ್ ನಿಂದ ತಾನವ್ ವರೆಗಿನ ನವೀಕರಣ ಕಾಮಗಾರಿ ಪೂರ್ಣಗೊಂಡಿದೆ ಎಂದು ಲೋಕೋಪಯೋಗಿ ಸಚಿವ ಮುಹಮ್ಮದ್ ರಿಯಾಝ್ ಹೇಳಿದ್ದಾರೆ. ಆಧುನಿಕ ರೀತಿಯಲ್ಲಿ ಬಸ್ ಬೇಯಲ್ಲಿ ನವೀಕರಣ ಮಾಡಲಾಗಿದೆ ಎಂದು ಸಚಿವರು ತಿಳಿಸಿದರು.
10 ಸೇತುವೆಗಳು, 122 ಮೋರಿಗಳು, 25.5 ಕಿ.ಮೀ ಉದ್ದದ ಅಡ್ಡ ಕಾಲುವೆ ನಿರ್ಮಾಣ, 3793 ಮೀ ಉದ್ದದ ರಕ್ಷಣಾ ಗೋಡೆ, ವಿವಿಧ ಜಂಕ್ಷನ್‍ಗಳ ನವೀಕರಣ, 56 ಬಸ್ ನಿರೀಕ್ಷಣಾ ಕೇಂದ್ರಗಳು ಮತ್ತು ಬಸ್ ಬೇಗಳಂತಹ ಆಧುನಿಕ ಗುಣಮಟ್ಟದಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಸಚಿವ ಮುಹಮ್ಮದ್ ರಿಯಾಝ್ ಹೇಳಿರುವರು.
ಕೋಝಿಕ್ಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳನ್ನು ಸಂಪರ್ಕಿಸುವ ಈ ರಸ್ತೆಯು ಪಾಲಕ್ಕಾಡ್ ಜಿಲ್ಲೆಯ ಮನ್ನಾರ್ಕಾಡ್, ಕೊಂಗಾಡ್, ಮಲಂಪುಝ ಮತ್ತು ಪಾಲಕ್ಕಾಡ್ ಕ್ಷೇತ್ರಗಳ ಮೂಲಕ ಹಾದುಹೋಗುತ್ತದೆ ಎಂದು ಸಚಿವರು ವಿವರಿಸಿದರು.
ಕೇಂದ್ರ ಮೇಲ್ಮೈ ಸಾರಿಗೆ ಸಚಿವ ನಿತಿನ್ ಗಡ್ಕರಿ ಮತ್ತು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿನ್ನೆ ಈ ರಸ್ತೆಯನ್ನು ಉದ್ಘಾಟಿಸಿದರು. ಕಾಮಗಾರಿ ಪೂರ್ಣಗೊಳಿಸಲು ಶ್ರಮಿಸಿದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ಹಾಗೂ ಸಹಕರಿಸಿದ ಜನಪ್ರತಿನಿಧಿಗಳಿಗೆ ಹಾಗೂ ಜನತೆಗೆ ವಿಶೇಷ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಮುಖ್ಯಮಂತ್ರಿಗಳು ಟಿಪ್ಪಣಿಯಲ್ಲಿ ತಿಳಿಸಿದ್ದಾರೆ.


