ತಿರುವನಂತಪುರಂ: ರಾಜ್ಯಾದ್ಯಂತ 2000 ಪಡಿತರ ಅಂಗಡಿಗಳನ್ನು ಕೆ ಸ್ಟೋರ್‍ಗಳಾಗಿ ಮೇಲ್ದರ್ಜೆಗೇರಿಸಲು ಆಹಾರ ಸಚಿವ ಜಿ ಆರ್ ಅನಿಲ್ ನಿರ್ಧರಿಸಿದ್ದಾರೆ. ಮೊದಲ ಹಂತದಲ್ಲಿ 1265 ಅಂಗಡಿಗಳನ್ನು ಕೆ-ಸ್ಟೋರ್‍ಗಳಾಗಿ ಮೇಲ್ದರ್ಜೆಗೇರಿಸಲಾಗುವುದು. ಇದರಲ್ಲಿ ಶೇ.10ರಷ್ಟನ್ನು ಮಾರ್ಚ್ ತಿಂಗಳೊಳಗೆ ಕೆ ಸ್ಟೋರ್ ಗಳಾಗಿ ಮೇಲ್ದರ್ಜೆಗೇರಿಸುವ ಗುರಿಯನ್ನು ಸರಕಾರ ಹೊಂದಿದೆ ಎಂದು ಸಚಿವರು ತಿಳಿಸಿದರು.
ಕಳೆದ ಏಳು ತಿಂಗಳಲ್ಲಿ ಕೆ ಸ್ಟೋರ್ಸ್ ಆಗಿ ಮೇಲ್ದರ್ಜೆಗೇರಿದ 66 ಮಳಿಗೆಗಳಿಂದ 1,45,32,652 ರೂ.ಗಳ ಆದಾಯ ಗಳಿಸಲು ಸಾಧ್ಯವಾಗಿದೆ. ಪ್ರಸ್ತುತ, ಪಡಿತರ ಅಂಗಡಿಗಳಿಂದ ಲಭ್ಯವಿರುವ ಸೇವೆಗಳ ಹೊರತಾಗಿ, ಕೈಗಾರಿಕಾ ಇಲಾಖೆಯಿಂದ ಎಂಎಸ್,..ಎಂಇ. ಉತ್ಪನ್ನಗಳು, ಕೃಷಿ ಇಲಾಖೆಯಿಂದ ಮೌಲ್ಯವರ್ಧಿತ ಉತ್ಪನ್ನಗಳು ಮತ್ತು ಮಿಲ್ಮಾ ಉತ್ಪನ್ನಗಳು ಕೆ ಸ್ಟೋರ್‍ಗಳ ಮೂಲಕವೂ ಲಭ್ಯವಿದೆ.
ಜಲಸಂಪನ್ಮೂಲ ಇಲಾಖೆಯ ಸಹಕಾರದೊಂದಿಗೆ ಕ್ರಿಸ್‍ಮಸ್ ಗೂ ಮುನ್ನವೇ ಪಡಿತರ ಅಂಗಡಿಗಳ ಮೂಲಕ ಕುಡಿಯುವ ನೀರು ವಿತರಣೆಯನ್ನು ಜಾರಿಗೊಳಿಸಲಾಗಿದೆ. ಕಡಿಮೆ ದರದಲ್ಲಿ ಪಡಿತರ ಅಂಗಡಿಗಳಿಂದ ಕುಡಿಯುವ ನೀರು ವಿತರಿಸಲಾಗುತ್ತದೆ. ಅಲ್ಲದೆ, ಕೆ ಸ್ಟೋರ್‍ನಲ್ಲಿ ಸಣ್ಣ ಗ್ಯಾಸ್ ಸ್ಟೌವ್‍ಗಳು ಲಭ್ಯವಿದೆ. ಪಡಿತರ ವರ್ತಕರು ಸಾಮಾನ್ಯ ಸೇವಾ ಕೇಂದ್ರದ ಸೇವೆಗಳಾದ ವಿಮಾನ ಟಿಕೆಟ್ ಬುಕ್ಕಿಂಗ್, ಮೊಬೈಲ್ ರೀಚಾಜಿರ್ಂಗ್, ಗ್ರಾಮ ಕಚೇರಿಯಿಂದ ಪ್ರಮಾಣಪತ್ರಗಳನ್ನು ಕೆ ಮಳಿಗೆಗಳ ಮೂಲಕ ಒದಗಿಸುವ ಮೂಲಕ ಹೆಚ್ಚಿನ ಆದಾಯ ಗಳಿಸಲು ಮುಂದಾಗಬೇಕು. ಸಾರ್ವಜನಿಕ ವಿತರಣಾ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಕೇರಳಕ್ಕೆ ಸರಿಯಾದ ಮನ್ನಣೆ ನೀಡುತ್ತಿಲ್ಲ. ಕೇಂದ್ರದ ಅನುದಾನದಲ್ಲಿ ನಿರಂತರವಾಗಿ ಕಡಿತ ಮಾಡಲಾಗುತ್ತಿದೆ ಎಂದು ಸಚಿವರು ಹೇಳಿದರು.
ಹಳೆಯ ಪಡಿತರ ಅಂಗಡಿಗಳನ್ನು ಕೆ ಸ್ಟೋರ್ ಗಳಾಗಿ ಉತ್ತಮ ಪಡಿಸಿ, ಬದಲಾಯಿಸಿ ಸಾರ್ವಜನಿಕರಿಗೆ ಹೆಚ್ಚಿನ ಸೌಲಭ್ಯ ಮತ್ತು ಉತ್ಪನ್ನಗಳನ್ನು ಒದಗಿಸುತ್ತಿದೆ. ಸಾಮೂಹಿಕ ಕಾರ್ಯದ ಮೂಲಕ ಕೆ-ಸ್ಟೋರ್‍ಗಳ ಕಾರ್ಯನಿರ್ವಹಣೆಯನ್ನು ಸುಧಾರಿಸಬೇಕು ಎಂದು ಸಚಿವರು ಹೇಳಿದರು. ಎರ್ನಾಕುಳಂ ಜಿಲ್ಲೆಯ 126 ಪಡಿತರ ಅಂಗಡಿಗಳನ್ನು ಮಾರ್ಚ್‍ಗೆ ಮೊದಲು ಕೆ ಸ್ಟೋರ್‍ಗಳಾಗಿ ಪರಿವರ್ತಿಸಲಾಗುವುದು ಎಂದು ಸಚಿವರು ಹೇಳಿದರು.


