ಶಬರಿಮಲೆ: ಸನ್ನಿಧಿಯ 18ನೇ ಮೆಟ್ಟಿಲು ಬಳಿ ತೆಂಗಿನಕಾಯಿ ಒಡೆಯುವ ವೇಳೆ ಯಾತ್ರಾರ್ಥಿ ಗಾಯಗೊಂಡಿದ್ದಾರೆ. ಕೊಲ್ಲಂ, ಪರವೂರು, ಪುದುಕ್ಕುಳಂ ಕೃಷ್ಣತೀರ್ಥ ಎಂಬಲ್ಲಿಯ ಲೀಜು (38) ತಲೆಗೆ ಗಾಯವಾಗಿದೆ.
ಲೀಜು ಅವರನ್ನು ಸನ್ನಿಧಾನಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ 18ನೇ ಮೆಟ್ಟಿಲು ಹತ್ತುವ ವೇಳೆ ಬೇರೊಬ್ಬ ವ್ರತಧಾರಿ ಎಸೆದ ತೆಂಗಿನಕಾಯಿಯಿಂದ ಗಾಯಗೊಂಡರು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.





