ಪತ್ತನಂತಿಟ್ಟ: ಮಕರ ಬೆಳಕು ಉತ್ಸವಕ್ಕೆ ಶಬರಿಮಲೆಗೆ ಬರುವ ಯಾತ್ರಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ ಎಂದು ಸಾರಿಗೆ ಸಚಿವ ಕೆ.ಬಿ. ಗಣೇಶ್ ಕುಮಾರ್ ತಿಳಿಸಿದ್ದಾರೆ. ಶಬರಿಮಲೆ ಯಾತ್ರಾರ್ಥಿಗಳಿಗೆ ಕೆಎಸ್‍ಆರ್‍ಟಿಸಿ ಸಾಕಷ್ಟು ಬಸ್‍ಗಳನ್ನು ಒದಗಿಸಲಿದೆ ಎಂದು ಸಚಿವರು ಹೇಳಿದರು.
ಯಾತ್ರಾರ್ಥಿಗಳನ್ನು ಕರೆದೊಯ್ಯುವ ಬಸ್‍ಗಳನ್ನು ರಸ್ತೆಯಲ್ಲಿ ಅಲ್ಲಲ್ಲಿ ವೃಥಾ ನಿಲ್ಲಿಸದಂತೆ ಪೋಲೀಸರಿಗೆ ಸೂಚನೆ ನೀಡಲಾಗುವುದು ಎಂದು ಗಣೇಶ್ ಕುಮಾರ್ ಮಾಹಿತಿ ನೀಡಿದರು. ಜನವಸತಿ ಇಲ್ಲದ ಸ್ಥಳಗಳಲ್ಲಿ ಬಸ್ ನಿಲ್ಲಿಸಿದರೆ ಯಾತ್ರಾರ್ಥಿಗಳಿಗೆ ತೊಂದರೆಯಾಗಲಿದ್ದು, ಪೆÇಲೀಸರು ಈ ಬಗ್ಗೆ ಗಮನಹರಿಸಬೇಕು ಎಂದು ಸಚಿವರು ಸೂಚಿಸಿದರು.
ಬಸ್ ಮುಂದೆ ಕುಳಿತು ಘೋಷಣೆ ಕೂಗುವುದು ಸರಿಯಲ್ಲ. ನಾವು ಪ್ರತಿಭಟನೆ ಮಾಡಲು ಶಬರಿಮಲೆಗೆ ಹೋಗುತ್ತಿಲ್ಲ. ನಿಲ್ದಾಣದಲ್ಲಿ ಬಸ್ ಹತ್ತಲು ನೂಕುನುಗ್ಗಲು ಕಡಿಮೆ ಮಾಡಲು ಕ್ರಮಕೈಗೊಳ್ಳಲಾಗುವುದು. ಪಂಬಾದಲ್ಲಿ ಅರವಣ, ಅಪ್ಪಗಳನ್ನು ಬ್ಯವಸ್ಥಿತವಾಗಿ ಹಂಚಬೇಕು, ಆಗ ಸನ್ನಿಧಾನದಲ್ಲಿ ಜನಸಂದಣಿ ಕಡಿಮೆಯಾಗುತ್ತದೆ ಎಂದು ಗಣಶ್ ಕುಮಾರ್ ಸಲಹೆ ನೀಡಿದರು.





