ನವದೆಹಲಿ: ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ಮಹಾನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ದಲ್ಜಿತ್ ಸಿಂಗ್ ಚೌಧರಿ ನೇಮಕಗೊಂಡಿದ್ದಾರೆ.
0
samarasasudhi
ಜನವರಿ 19, 2024
ನವದೆಹಲಿ: ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ)ದ ಮಹಾನಿರ್ದೇಶಕರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ದಲ್ಜಿತ್ ಸಿಂಗ್ ಚೌಧರಿ ನೇಮಕಗೊಂಡಿದ್ದಾರೆ.
ಚೌಧರಿ ಅವರು ಕೇಂದ್ರ ಮೀಸಲು ಪೊಲೀಸ್ ಪಡೆ(ಸಿಆರ್‌ಪಿಎಫ್)ಯ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು. ಇದೀಗ ಸಶಸ್ತ್ರ ಸೀಮಾ ಬಲದ ಮುಖ್ಯಸ್ಥರಾಗಿದ್ದಾರೆ.
ಎಸ್‌ಎಸ್‌ಬಿಯ ಮುಖ್ಯಸ್ಥರಾಗಿದ್ದ ಆರ್. ಶುಕ್ಲಾ ಅವರನ್ನು ಕೇಂದ್ರ ಸರ್ಕಾರ ಮಹಾರಾಷ್ಟ್ರಕ್ಕೆ ವಾಪಸ್ ಕಳುಹಿಸಿತ್ತು. ಆಗಿನಿಂದ ಎಸ್‌ಎಸ್‌ಬಿ ಮುಖ್ಯಸ್ಥರ ಹುದ್ದೆ ಖಾಲಿ ಇತ್ತು. ಸದ್ಯ ಶುಕ್ಲಾ ಅವರು ಮಹಾರಾಷ್ಟ್ರದ ಪೊಲೀಸ್ ಮಹಾನಿರ್ದೇಶಕರಾಗಿದ್ದಾರೆ.
ಚೌಧರಿ ಅವರು ಉತ್ತರಪ್ರದೇಶ ರಾಜ್ಯದ 1990ರ ಕೇಡರ್‌ನ ಐಪಿಎಸ್ ಅಧಿಕಾರಿಯಾಗಿದ್ದಾರೆ. ಇವರು 2025ರ ನವೆಂಬರ್ 30ಕ್ಕೆ ನಿವೃತ್ತಿಯಾಗಲಿದ್ದಾರೆ.
ಸಶಸ್ತ್ರ ಸೀಮಾ ಬಲವು ಭಾರತಕ್ಕೆ ಹೊಂದಿಕೊಂಡಿರುವ ನೇಪಾಳ ಮತ್ತು ಭೂತಾನ್ ಗಡಿಗಳನ್ನು ಕಾಯುತ್ತದೆ.