ಪಾಲಕ್ಕಾಡ್: ಸಭ್ಯ ರೀತಿಯಲ್ಲಿ ವರ್ತಿಸಲು ಕೇಳಿದ ವಕೀಲನ ವಿರುದ್ಧ ಪೋಲೀಸರು ಪ್ರತೀಕಾರದ ಕ್ರಮ ಕೈಗೊಂಡಿದ್ದಾರೆ. ಆಲತ್ತೂರು ಪೋಲೀಸ್ ಠಾಣೆಯ ಎಸ್‍ಐ ರಿನೇಶ್ ಅವರನ್ನು ನಯವಾಗಿ ಮಾತನಾಡುವಂತೆ ವಕೀಲ ಅಕಿಬ್ ಸುಹೇಲ್ ಹೇಳಿದ್ದರ ಪರಿಣಾಮ ಪ್ರತೀಕಾರ ಎದುರಿಸಬೇಕಾಯಿತು.
ಇದರಿಂದ ಕುಪಿತಗೊಂಡ ಪೋಲೀಸ್ ಭೂಪ ಅಕ್ವಿಬ್ ವಿರುದ್ಧ ಆಲತ್ತೂರು ಮತ್ತು ಚಿತ್ತೂರು ಠಾಣೆಗಳಲ್ಲಿ ಪ್ರಕರಣ ದಾಖಲಿಸಿರುವರು. ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ ಆರೋಪ ಹೊರಿಸಲಾಗಿದೆ. ಕಾರು ಅಪಘಾತಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಾಹನವನ್ನು ಹಸ್ತಾಂತರಿಸಲು ನ್ಯಾಯಾಲಯದ ಆದೇಶದೊಂದಿಗೆ ಅಕಿಬ್ ಸುಹೇಲ್ ಅವರನ್ನು ಪೋಲೀಸ್ ಭೇಟಿಯಾಗಿದ್ದ.
ಎಸ್ ಐ ರಿನೇಶ್ ಜತೆ ವಕೀಲರು ಮಾತನಾಡಿರುವ ವಿಡಿಯೋ ದೃಶ್ಯಾವಳಿ ಬಿಡುಗಡೆಯಾಗಿದೆ. ನ್ಯಾಯಾಲಯದ ಆದೇಶವನ್ನು ಪರಿಶೀಲಿಸಬೇಕು ಮತ್ತು ಚಾಲಕನನ್ನು ಹಾಜರುಪಡಿಸದೆ ವಾಹನವನ್ನು ಬಿಡಲಾಗುವುದಿಲ್ಲ ಎಂದು ಪೋಲೀಸರು ಪ್ರತಿಪಾದಿಸುತ್ತಾರೆ. ಆ ಬಳಿಕ ವಾಹನ ಬಿಟ್ಟು ಹೋಗಲಾರೆ ಎಂದು ವಕೀಲರು ಹೇಳಿದಾಗ ಮಾತುಕತೆ ಅಧಿಕಾರಿಯ ಬೆದರಿಕೆಗೆ ತಿರುಗಿತು. ಎಸ್‍ಐ ಕೆಟ್ಟದಾಗಿ ಮಾತನಾಡಿದಾಗ, ವಕೀಲರು ಮರ್ಯಾದೆಯಲ್ಲಿ ಮಾತನಾಡಲು ಹೇಳಿದರು. ವಾಹನ ಬಿಡಲು ಸಾಧ್ಯವಿಲ್ಲ ಎಂದು ಪೋಲೀಸರು ನಿರ್ಧರಿಸಿದ ಬಳಿಕ ವಕೀಲರು ಚಿತ್ತೂರು ನ್ಯಾಯಾಲಯಕ್ಕೆ ಮರುಪರಿಶೀಲನಾ ಅರ್ಜಿ ಸಲ್ಲಿಸಿದರು. ಇಲ್ಲೂ ಉಭಯ ಪಕ್ಷಗಳ ನಡುವೆ ವಾಗ್ವಾದ ನಡೆದಿದೆ ಎಂದು ತಿಳಿದುಬಂದಿದೆ.





