HEALTH TIPS

ಬಿಲ್ಕಿಸ್ ಬಾನು ಪ್ರಕರಣ: ಶರಣಾಗಲು ಕಾಲಾವಕಾಶ ಕೋರಿದ ಮೂವರು ದೋಷಿಗಳು

                ವದೆಹಲಿ: ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಕೋರಿ, ಬಿಲ್ಕಿಸ್‌ ಬಾನು ಸಾಮೂಹಿಕ ಅತ್ಯಾಚಾರ ಹಾಗೂ ಆಕೆಯ ಕುಟುಂಬಸ್ಥರ ಕೊಲೆ ಪ್ರಕರಣ ದೋಷಿಗಳ ಪೈಕಿ ಮೂವರು ಗುರುವಾರ ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಾರೆ.

              ನ್ಯಾಯಮೂರ್ತಿಗಳಾದ ಬಿ.ವಿ ನಾಗರತ್ನ ಹಾಗೂ ಸಂಜಯ್‌ ಕರೊಲ್ ಅವರ ಪೀಠದ ಮುಂದೆ ಮನವಿ ಸಲ್ಲಿಸಲಾಗಿದ್ದು, ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್‌ ಅವರ ಪೀಠದ ಮುಂದೆ ಇಡುವಂತೆ ರಿಜಿಸ್ಟ್ರಿಗೆ ಸೂಚಿಸಲಾಗಿದೆ.

              ಶರಣಾಗಲು ಹೆಚ್ಚಿನ ಕಾಲಾವಕಾಶ ನೀಡಬೇಕು ಎಂದು ಮೂವರು ಕೋರಿದ್ದಾರೆ. ಆದರೆ ಪೀಠ ಪುನರ್‌ ರಚನೆ ಆಗಬೇಕಾಗಿರುವುದರಿಂದ, ರಿಜಿಸ್ಟ್ರಿ ಸಿಜೆಐ ಅವರಿಂದ ನಿರ್ದೇಶನ ತೆಗೆದುಕೊಳ್ಳಬೇಕು' ಎಂದು ಪೀಠ ಹೇಳಿದೆ.

                  ಪ್ರಕರಣದ 11 ದೋಷಿಗಳನ್ನು ಬಿಡುಗಡೆ ಮಾಡಿದ ಗುಜರಾತ್‌ ಸರ್ಕಾರದ ನಿರ್ಧಾರವನ್ನು ಜನವರಿ 8ರಂದು ಸುಪ್ರೀಂ ಕೋರ್ಟ್‌ ರದ್ದು ಮಾಡಿತ್ತು. ಅಲ್ಲದೆ ಎರಡು ವಾರದೊಳಗೆ ಶರಣಾಗಬೇಕು ಎಂದು ಆದೇಶಿಸಿತ್ತು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries