ಕಾಸರಗೋಡು: ರಾಷ್ಟ್ರೀಯ ಹೆದ್ದಾರಿ ಪೆರರಿಯ ಸನಿಹದ ಕುಣಿಯ ಎಂಬಲ್ಲಿ ಕಾರು ಮತ್ತು ಸ್ಕೂಟರ್ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, ಪಾದಚಾರಿ ಸಏರಿದಂತೆ ಐವರು ಗಾಯಗೊಂಡಿದ್ದಾರೆ.
ತಲಕ್ಲಾಯಿ ನಿವಾಸಿ, ನಿವೃತ್ತ ಸಿಪಿಸಿಆರ್‍ಐ ಉದ್ಯೋಗಿ ನಾರಾಯಣನ್ ನಾಯರ್(65)ಹಾಗೂ ಇವರ ಸಂಬಂಧಿ ಗೋಪಾಲಕೃಷ್ಣನ್ ನಾಯರ್(58)ಮೃತಪಟ್ಟವರು. ಇವರಿಬ್ಬರೂ ಸಂಚರಿಸುತ್ತಿದ್ದ ಸ್ಕೂಟರ್‍ಗೆ ಕಾರು ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಸ್ಕೂಟರಿಗೆ ಡಿಕ್ಕಿಯಾದ ಕಾರು ರಸ್ತೆಕಾಮಗಾರಿ ನಡೆಯುತ್ತಿದ್ದ ಹೊಂಡಕ್ಕೆ ಬಿದ್ದು, ಕಾರಿನಲ್ಲಿದ್ದ ಐವರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.


